ಚುನಾವಣೆಗೂ ತೈಲ​ ದರ ಏರಿಕೆಗೂ ಸಂಬಂಧವಿಲ್ಲ: ಆರ್​ ಅಶೋಕ್​ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

Prasthutha|

- Advertisement -

ವಿಜಯಪುರ: ಚುನಾವಣೆಗೂ ತೈಲ​ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ತೈಲ ದರ ನಾವು ಮೂರು ರೂಪಾಯಿ ಹೆಚ್ಚಳ ಮಾಡಿದ್ದೇವೆ. ಮೂರು ರೂ. ಹೆಚ್ಚಳ ಮಾಡಿದ್ದಕ್ಕೆ ಚುನಾವಣೆ ಸಂಬಂಧನಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಪಿ ಚುನಾವಣೆ ಸೋಲಿನ ಸೇಡಿಗೆ ತೈಲ ದರ ಏರಿಕೆ ಎಂಬ ವಿಪಕ್ಷ ನಾಯಕ ಆರ್​. ಅಶೋಕ್​ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಇದೇ ಕುಮಾರಸ್ವಾಮಿ ಇದ್ದಾಗ ಶೇ.35ರಷ್ಟಿತ್ತು. ರಾಜ್ಯದಲ್ಲಿ 102.86 ಪೈಸೆ ಈಗಾ ಇದೆ. ತಮಿಳುನಾಡು ಸಮ ಆಗಿದೆ. ಕಾಸರಗೋಡು 106.06 ಪೈಸೆ, ಆಂಧ್ರಪ್ರದೇಶದಲ್ಲಿ 109 ರೂ. ಇದೆ. ಹೈದರಾಬಾದ್​ನಲ್ಲೂ ಹೆಚ್ಚಿದೆ. ಮಹಾರಾಷ್ಟ್ರ 104 ರೂ, ರಾಜಸ್ಥಾನ 104.86 ರೂ. ಮಧ್ಯಪ್ರದೇಶದ 106.47 ರೂ. ಇದೆ.

- Advertisement -

ರಾಜಸ್ಥಾನದಲ್ಲಿ ದರ 104.86 ರೂಪಾಯಿ ಇದೆ. ಮಧ್ಯಪ್ರದೇಶದಲ್ಲಿ 106 ರೂಪಾಯಿ ಇದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಯಾರ ಸರ್ಕಾರ ಇದೆ ಎಂದು ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ನಾವು ಸೋತಿಲ್ಲ, ಬಿಜೆಪಿ ಸೋತಿದೆ
ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು 1 ಸ್ಥಾನ ಗೆದ್ದಿದ್ದೆವು. 2024ರ ಲೋಕಸಭೆ ಚುನಾವಣೆಯಲ್ಲಿ 9 ಸ್ಥಾನ ಗೆದ್ದಿದ್ದೇವೆ. ರಾಜ್ಯದಲ್ಲಿ ಬಿಜೆಪಿಯವರು 25ರಿಂದ 17 ಸ್ಥಾನಕ್ಕೆ ಕುಸಿದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾವು ಸೋತಿಲ್ಲ, ಬಿಜೆಪಿ ಸೋತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

Join Whatsapp
Exit mobile version