ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಿ ಎಂ ಇಬ್ರಾಹಿಂ । ಕುತೂಹಲ ಮೂಡಿಸಿದ ಜೆಡಿಎಸ್ ಸೇರುವ ಕುರಿತ ಹೇಳಿಕೆ

Prasthutha|

- Advertisement -

ಬೆಂಗಳೂರು:  ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಅವರು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ನಲ್ಲಿರುವ ಸಿ ಎಂ ಇಬ್ರಾಹಿಂ ಅವರು ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಸಿದ್ದರಾಮಯ್ಯ ಭೇಟಿ ಕುತೂಹಲ ಮೂಡಿಸಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ ಇಬ್ರಾಹಿಂ, ಇಂದು ಶುಭ ಶುಕ್ರವಾರ, ಎಲ್ಲವೂ ಒಳ್ಳೆಯದಾಗುತ್ತದೆ ಎಂದರು. ಜೆಡಿಎಸ್ ಗೆ ಸೇರುವ ವಿಚಾರವಾಗಿ ಮಾತನಾಡಿದ ಅವರು, ಅದು ಇಲ್ಲಿ ತೀರ್ಮಾನ ಆಗುವುದಿಲ್ಲ. ದೆಹಲಿಯಲ್ಲಿ ತೀರ್ಮಾನ ಆಗುತ್ತದೆ. ಸಮಯ ಸಿಕ್ಕಾಗ ದೆಹಲಿಗೆ ಹೋಗಿ ಬರುತ್ತೇನೆ. ಹೈಕಮಾಂಡ್ ಜೊತೆ ಕೂಡ ಚರ್ಚೆ ಮಾಡುತ್ತೇನೆ. ಸೋನಿಯಾ ‌ಭೇಟಿಗೆ ಟೈಮ್ ಕೇಳಿದ್ದೇನೆ. ನಾನು ಜೆಡಿಎಸ್ ಸೇರುತ್ತೇನೆಂದು ಹೇಳಲಿಲ್ಲ. ಕುಮಾರಸ್ವಾಮಿ, ದೇವೆಗೌಡ ಜೊತೆ ಚೆನ್ನಾಗಿದ್ದೇನೆ. ಬಿಜೆಪಿ ಪಕ್ಷದ ನಾಯಕರು ನನ್ನ ಜೊತೆ ಚೆನ್ನಾಗಿದ್ದಾರೆ.ಹಾಗಂತ ಕಾಂಗ್ರೆಸ್ ಬಿಡ್ತೇನೆ ಅಂತ ಅಲ್ಲ. ನಾನು ಬಸವ ತತ್ವದಲ್ಲಿ ನಂಬಿಕೆ ಇರೋನು. ಏಪ್ರಿಲ್ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ. ಈವರೆಗೆ ನಾನು ಏನೇನು ಹೇಳಿದ್ದೇನೋ ಅದೆಲ್ಲವೂ ಆಗಿದೆ. ಏಪ್ರಿಲ್ ತಿಂಗಳ ಬಳಿಕ ಬದಲಾವಣೆ ಖಚಿತ ಎಂದರು.

- Advertisement -

ಮೊನ್ನೆ ಇಬ್ರಾಹಿಂ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ಮಾಡಿ ಊಟ ಮಾಡಿದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಎಲ್ಲ ದೇವರ ದಯೆ, ಋಣ ಸಂದಾಯ..” ಎಂದಷ್ಟೇ ಹೇಳಿದ್ದಾರೆ.

Join Whatsapp