Home ಟಾಪ್ ಸುದ್ದಿಗಳು ಹೇಟ್ – ಇನ್ – ಇಂಡಿಯಾ – ಮೇಕ್-ಇನ್-ಇಂಡಿಯಾ ಸಹಬಾಳ್ವೆ ಸಾಧ್ಯವಿಲ್ಲ: ರಾಹುಲ್ ಗಾಂಧಿ ಕಿಡಿ

ಹೇಟ್ – ಇನ್ – ಇಂಡಿಯಾ – ಮೇಕ್-ಇನ್-ಇಂಡಿಯಾ ಸಹಬಾಳ್ವೆ ಸಾಧ್ಯವಿಲ್ಲ: ರಾಹುಲ್ ಗಾಂಧಿ ಕಿಡಿ

ನವದೆಹಲಿ: ಹೇಟ್ – ಇನ್ – ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ. ಬದಲಿಗೆ ಭಾರತದ ವಿನಾಶಕಾರಿ ನಿರುದ್ಯೋಗ ಬಿಕ್ಕಟ್ಟಿನ ಮೇಲೆ ಗಮನ ಕೇಂದ್ರೀಕರಿಸುವ ಸಮಯವಿದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.


ಕೆಲ ಜಾಗತಿಕ ಬ್ರಾಂಡ್ ಗಳು/ಕಂಪನಿಗಳು ಭಾರತದಿಂದ ಹೊರನಡೆಯುತ್ತಿರುವ ಕುರಿತು ಟ್ವೀಟ್ ಮಾಡಿರುವ ಅವರು, ಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ ಎಂದು ಖಾರವಾಗಿ ಟೀಕಿಸಿದ್ದಾರೆ. ಜೊತೆಗೆ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಗಮನಹರಿಸುವಂತೆ ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿಯವರನ್ನು ಟೀಕಿಸಿ ಟ್ವೀಟಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತದಿಂದ ಜಾಗತಿಕ ಬ್ರಾಂಡ್ ಗಳು ಕಾಲ್ಕಿತ್ತಿವೆ. ಬುಧವಾರ ಏಪ್ರಿಲ್ 27ರ ತನ್ನ ಟ್ವೀಟ್ ನಲ್ಲಿ ರಾಹುಲ್ ಗಾಂಧಿ, ಜಾಗತಿಕ ಬ್ರಾಂಡ್ ಗಳು 7, 9 ಫ್ಯಾಕ್ಟರಿಗಳು, 649 ಡೀಲರ್ ಶಿಪ್ ಗಳು, 84,000 ಕೆಲಸಗಳು ಭಾರತದ ಸಹವಾಸ ಬೇಡ ಎಂದು ಹೋದವೆಂದರೆ ದ್ವೇಷ ಭಾರತವು ಮೇಕ್ ಇನ್ ಇಂಡಿಯಾದೊಂದಿಗೆ ಸಹಬಾಳ್ವೆ ಮಾಡುವುದೆಂಬುದು ಆಗದ ಮಾತು ಎಂದಿದ್ದಾರೆ ರಾಹುಲ್.

ಬರೇ ಇಮೇಜ್ ಬೆಳೆಸುವುದನ್ನು ಬಿಟ್ಟು ಭಾರತದ ಸದ್ಯದ ನಿರುದ್ಯೋಗ ಸಮಸ್ಯೆ ನಿವಾರಣೆಯತ್ತ ಗಮನ ನೀಡುವಂತೆ ರಾಹುಲ್ ಗಾಂಧಿಯವರು ಪ್ರಧಾನಿಯವರಲ್ಲಿ ಕೇಳಿಕೊಂಡಿದ್ದಾರೆ.

ಹಾಗೆಯೇ ರಾಹುಲ್ ಅವರು ದೇಶದಿಂದ ಹೊರಟು ಹೋದ 7 ಜಾಗತಿಕ ಬ್ರಾಂಡ್ ಗಳ ಚಿತ್ರವನ್ನು ಕೂಡ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ. 2017ರಲ್ಲಿ ಚೆವರೋಲೆಟ್, 2018ರಲ್ಲಿ ಮ್ಯಾನ್ ಟ್ರಕ್ಸ್, 2019ರಲ್ಲಿ ಫಿಯೆಟ್ ಮತ್ತು ಯುನೈಟೆಡ್ ಮೋಟಾರ್ಸ್, 2020ರಲ್ಲಿ ಹಾರ್ಲೆ ಡೇವಿಡ್ಸನ್, 2021ರಲ್ಲಿ ಫೋರ್ಡ್, 2022ರಲ್ಲಿ ಡಾಟ್ಸನ್ ಬ್ರಾಂಡ್ ಗಳು ಭಾರತ ಸಾಕು ಎಂದು ಇಲ್ಲಿಂದ ಹೋಗಿವೆ.

7 ಜಾಗತಿಕ ಬ್ರ್ಯಾಂಡ್ ಗಳು-9 ಕಾರ್ಖಾನೆಗಳು, 649 ಡೀಲರ್ಶಿಪ್ ಗಳು, 84,000 ಉದ್ಯೋಗಗಳು ಭಾರತದಿಂದ ಹೋಗಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Join Whatsapp
Exit mobile version