Home ಟಾಪ್ ಸುದ್ದಿಗಳು ಕದನ ವಿರಾಮ ಒಪ್ಪಂದದ ಸನಿಹದಲ್ಲಿದ್ದೇವೆ: ಹಮಾಸ್‌

ಕದನ ವಿರಾಮ ಒಪ್ಪಂದದ ಸನಿಹದಲ್ಲಿದ್ದೇವೆ: ಹಮಾಸ್‌

ದೋಹಾ: ಸಾವಿರಾರು ನಾಗರಿಕರ ಮಾರಣ ಹೋಮ ನಿತ್ಯವೂ ವರದಿಯಾಗುತ್ತಿರುವ ಇಸ್ರೇಲ್- ಹಮಾಸ್ ಯುದ್ಧಕ್ಕೆ ಕೊನೆ ಬೀಳುವ ಸಾಧ್ಯತೆಯ ಆಶಾಕಿರಣವೊಂದು ಗೋಚರಿಸಿದೆ. ಇಸ್ರೇಲ್‌ನೊಂದಿಗೆ ಕದನ ವಿರಾಮಕ್ಕೆ ಒ‍ಪ್ಪಂದಕ್ಕೆ ನಾವು ತಯಾರು ಎಂದು ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆ ಟೆಲಿಗ್ರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕದನ ವಿರಾಮ ಒಪ್ಪಂದಕ್ಕೆ ನಾವು ಹತ್ತಿರವಾಗುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಬೆಳವಣಿಗೆಯ ಹಿಂದಿರುವ ಕತಾರ್ ಒಪ್ಪಂದದ ಮಧ್ಯಸ್ಥಿಕೆಯನ್ನು ವಹಿಸಿದೆ. ಕತಾರ್‌ನಲ್ಲಿರುವ ಹಮಾಸ್‌ ರಾಜಕೀಯ ಕಚೇರಿಯಲ್ಲಿ ಹನಿಯೆ ಇದ್ದು, ಅಲ್ಲಿ ಈ ಸಂಬಂಧ ಮಾತುಕತೆಗಳು ನಡೆಯುತ್ತಿವೆ.

ಹಮಾಸ್‌ ಬಳಿಯಿರುವ ಇರಿಸಿಕೊಂಡ 240 ಮಂದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ. ಆರಂಭಿಕ ಹಂತವಾಗಿ ಐದು ದಿನಗಳ ತಾತ್ಕಾಲಿಕ ಕದನ ವಿರಾಮ ಇರಲಿದ್ದು, ಭೂ ಅಥವಾ ವಾಯು ಮಾರ್ಗದ ಮೂಲಕ ಇಸ್ರೇಲ್ ದಾಳಿ ನಡೆಸುವಂತಿಲ್ಲ ಎನ್ನುವ ಷರತ್ತನ್ನು ಇಸ್ರೇಲ್ ಒಪ್ಪಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಒತ್ತೆಯಾಳಾಗಿರಿಸಿಕೊಂಡಿರುವವರ ಪೈಕಿ 50 ರಿಂದ 100 ಮಂದಿಯನ್ನು ಹಮಾಸ್‌ ಬಿಡುಗಡೆ ಮಾಡಬೇಕು ಎನ್ನಲಾಗಿದೆ.

ಇದಲ್ಲದೆ ಶಾಸ್ವತ ಕದನವಿರಾಮ, ಇನ್ನಿತರ ಷರತ್ತು, ಒಪ್ಪಂದ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.

Join Whatsapp
Exit mobile version