Home ಟಾಪ್ ಸುದ್ದಿಗಳು ಹವಾಮಾನ ವೈಪರೀತ್ಯ; ಸಂಕಷ್ಟದಲ್ಲಿ ಕಾಳುಮೆಣಸು ಬೆಳೆಗಾರರು

ಹವಾಮಾನ ವೈಪರೀತ್ಯ; ಸಂಕಷ್ಟದಲ್ಲಿ ಕಾಳುಮೆಣಸು ಬೆಳೆಗಾರರು

ಸೋಮವಾರಪೇಟೆ : ಹವಾಮಾನ ವೈಪರೀತ್ಯದಿಂದಾಗಿ ಕಾಳುಮೆಣಸಿನ ಫಸಲು ಉದುರಿ ಮಣ್ಣು ಸೇರುತ್ತಿದ್ದು, ನಿರಂತರ ಮಳೆಯಿಂದಾಗಿ ಈ ವರ್ಷವೂ ಬೆಳೆಗಾರರು ನಷ್ಟಕ್ಕೆ ಸಿಲುಕಿದ್ದಾರೆ.


ಈ ಬಾರಿ ಸಕಾಲಕ್ಕೆ ಮಳೆ ಸುರಿದು ಗಿಡಗಳಲ್ಲಿ ಕಾಳು ಕಟ್ಟಿತ್ತು. ಆದರೆ ನಿರಂತರ ಮಳೆ, ಶೀತ ಹೆಚ್ಚಾಗಿ ಕಾಫಿ ಹಾಗೂ ಮೆಣಸಿನ ಫಸಲು ಉದುರಿದೆ. ಮೆಣಸಿನ ಬಳ್ಳಿಗೆ ಕೊಳೆರೋಗ ಬಂದಿದ್ದು ಬಳ್ಳಿಗಳು ಒಣಗಲಾರಂಭಿಸಿವೆ.


ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರ ಸಂತೆ ಹಾಗೂ ಸೋಮವಾರಪೇಟೆ ಕಸಬಾ ಹೋಬಳಿಗಳಲ್ಲಿ ಮೆಣಸಿನ ಬೆಳೆ ನಷ್ಟವಾಗಿದೆ.


‘ಕಾಳು ಮೆಣಸಿಗೆ ಕೊಳೆರೋಗ ಬಂದಿದ್ದು, ಪ್ರಾರಂಭದ ಹಂತದಲ್ಲಿದೆ. ಮಳೆ ಬಿಡುವು ನೀಡಿದ ಕೂಡಲೇ ಮಿಶ್ರಣವನ್ನು ಸಿಂಪಡಿಸಿದರೆ ಹತೋಟಿಗೆ ಬರುತ್ತದೆ’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಶೆಟ್ಟಿ ಹೇಳಿದರು.

Join Whatsapp
Exit mobile version