Home ಟಾಪ್ ಸುದ್ದಿಗಳು ಪ್ರವಾದಿ ವಿರುದ್ಧ ದ್ವೇಷ ಭಾಷಣ| ಖಂಡನಾ ಮಸೂದೆ ಮಂಡಿಸುವಂತೆ ಎಎಪಿ ಸಂಸದ ಸಂಜಯ್ ಸಿಂಗ್ ರಿಗೆ...

ಪ್ರವಾದಿ ವಿರುದ್ಧ ದ್ವೇಷ ಭಾಷಣ| ಖಂಡನಾ ಮಸೂದೆ ಮಂಡಿಸುವಂತೆ ಎಎಪಿ ಸಂಸದ ಸಂಜಯ್ ಸಿಂಗ್ ರಿಗೆ ಧರ್ಮಗುರುಗಳ ಮನವಿ

ಹೊಸದಿಲ್ಲಿ: ರಾಝ ಅಕಾಡೆಮಿಯ ಇಸ್ಲಾಮಿಕ್ ಒಕ್ಕೂಟದ ಧರ್ಮಗುರುಗಳು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಪ್ರವಾದಿ ವಿರುದ್ಧ ದ್ವೇಷ ಭಾಷಣ ಮಾಡುವುದನ್ನು ತಡೆಯುವ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸುವಂತೆ ಕೇಳಿಕೊಂಡರು.

ಸಂಸದರನ್ನ ಭೇಟಿ ಮಾಡಿದ ಧರ್ಮಗುರುಗಳು ಪ್ರವಾದಿ ವಿರುದ್ಧ ಯಾವುದೇ ಕೆಟ್ಟ ನುಡಿಯಲ್ಲಿ ಮಾತನಾಡದಂತೆ ಕಾನೂನು ತರಲು ಕೇಳಿಕೊಂಡಿದ್ದಾರೆ. ಈ ಕುರಿತು ಇದಕ್ಕೂ ಮೊದಲು ಇಂತಹಾ ಒಂದು ಕಾನೂನು ರಚಿಸುವಂತೆ ಈ ಧರ್ಮಗುರುಗಳ ನಿಯೋಗ ಮಹಾರಾಷ್ಟ್ರ ಮತ್ತು ರಾಜಸ್ಥಾನ ಸರಕಾರಗಳಿಗೆ ಮನವಿ ಸಲ್ಲಿಸಿತ್ತು. ವಂಚಿತ್ ಬಹುಜನ ಅಘಾಡಿಯ ಪ್ರಕಾಶ್ ಅಂಬೇಡ್ಕರ್ ಅವರು ಇಂತಹಾ ಒಂದು ಕಾನೂನಿನ ಬೇಡಿಕೆಗೆ ಬೆಂಬಲ ನೀಡಿದ್ದಾರೆ.

ಇತ್ತೀಚೆಗೆ ಪುರೋಹಿತ ನರಸಿಂಗಾನಂದ ಸರಸ್ವತಿಯವರು ಪ್ರವಾದಿಯವರ ವಿರುದ್ಧ ಅಸಹ್ಯ ಮಾತನಾಡಿದ್ದರು. ದೆಹಲಿ ಪೋಲೀಸರು ಅವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು.

Join Whatsapp
Exit mobile version