ಉಳ್ಳಾಲ: SDPI ಕಾರ್ಯಕರ್ತರಿಂದ ಮದನಿ ನಗರ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಪವಿತ್ರ ರಂಝಾನ್ ತಿಂಗಳು ಆರಂಭಕ್ಕೂ ಮುನ್ನ ಗ್ರಾಮವನ್ನು ಸ್ವಚ್ಛತೆಯಲ್ಲಿಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮದನಿ ನಗರ ಬೂತ್ ಸಮಿತಿ ಅಧ್ಯಕ್ಷರಾದ ಝುಬೈರ್, ಕಾರ್ಯದರ್ಶಿಯಾದ ಮುನೀರ್, SDTU ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ರಹ್ಮಾನ್ ಮುನ್ನೂರು, ಮದನಿ ನಗರ ಪಂಚಾಯತ್ ಸದಸ್ಯರಾದ ಮುಹಮ್ಮದ್ ಆರೀಫ್, ಯೂಸುಫ್ ಮದನಿ ನಗರ ಮತ್ತು ಮದನಿ ನಗರ ಗ್ರಾಮ ಸಮಿತಿಯ ಸರ್ವ ಸದಸ್ಯರು ಮತ್ತು ಗ್ರಾಮದ ಹಿರಿಯ ಕಿರಿಯ ವ್ಯಕ್ತಿಗಳು ಈ ಪುಣ್ಯ ಕಾರ್ಯದಲ್ಲಿ SDPI ಯೊಂದಿಗೆ ಕೈ ಜೋಡಿಸಿದ್ದರು.