Home ಟಾಪ್ ಸುದ್ದಿಗಳು 5ನೇ ತರಗತಿಯ ವಿದ್ಯಾರ್ಥಿನಿಯನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದ ಟೀಚರ್!

5ನೇ ತರಗತಿಯ ವಿದ್ಯಾರ್ಥಿನಿಯನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದ ಟೀಚರ್!

ನವದೆಹಲಿ: ದೆಹಲಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಥಳಿಸಿ ಬಾಲ್ಕನಿಯಿಂದ ಕೆಳಕ್ಕೆಸೆದ ಆಘಾತಕಾರಿ ಘಟನೆ ನಡೆದಿದೆ.


ದೆಹಲಿಯ ಕರೋಲ್’ಬಾಗ್’ನಲ್ಲಿಯ ಬಾಲಿಕಾ ವಿದ್ಯಾಲಯದಲ್ಲಿ ಶಿಕ್ಷಕಿ ಗೀತಾ ಅವರು ಶುಕ್ರವಾರ ಬಾಲಕಿಯನ್ನು ಬಾಲ್ಕನಿಯಿಂದ ಕೆಳಕ್ಕೆಸೆದು ಶಿಕ್ಷಣದ ಇಂದಿನ ಸ್ಥಿತಿಗತಿಯನ್ನು ಪ್ರಸ್ತುತ ಪಡಿಸಿದ್ದಾರೆ.


ತೀವ್ರವಾಗಿ ಗಾಯಗೊಂಡಿರುವ ವಂದನಾ ಎಂಬ ಆ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದು, ಆಕೆಯ ಸ್ಥಿತಿ ಕಳವಳಕಾರಿಯಾಗಿದೆ ಎಂದು ತಿಳಿದು ಬಂದಿದೆ.
ಗೀತಾ ಎಂಬ ಆ ಶಿಕ್ಷಕಿಯನ್ನು ಬಂಧಿಸಲಾಗಿದೆ. ಈ ವಿದ್ಯಾಲಯದ ಟೀಚರುಗಳು ಬಾಲಕಿಯರಿಗೆ ಸದಾ ಹೊಡೆಯುತ್ತಿರುತ್ತಾರೆ ಎಂದು ಪೋಷಕರು ಪೊಲೀಸರಿಗೆ ಈಗ ದೂರು ನೀಡಿದ್ದಾರೆ.

Join Whatsapp
Exit mobile version