Home ಟಾಪ್ ಸುದ್ದಿಗಳು ನೀಲಿ ಶಾಲು-ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳ ನಡುವೆ ತಿಕ್ಕಾಟ: ತರಗತಿಗೆ ರಜೆ ಘೋಷಣೆ

ನೀಲಿ ಶಾಲು-ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳ ನಡುವೆ ತಿಕ್ಕಾಟ: ತರಗತಿಗೆ ರಜೆ ಘೋಷಣೆ

ಚಿಕ್ಕಮಗಳೂರು: ಇಲ್ಲಿನ ಐಡಿಎಸ್ಸಿ ಕಾಲೇಜಿನಲ್ಲಿ ಹಿಜಾಬ್ ಗೆ ಬೆಂಬಲ ವ್ಯಕ್ತಪಡಿಸಿ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಕಾಲೇಜಿಗೆ ಬಂದಾಗ ಎಬಿವಿಪಿ ಕಾರ್ಯಕರ್ತರು ಮುಖಾಮುಖಿಯಾದಾಗ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಇದೇ ವೇಳೆ ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳ ಎದುರು ಕೇಸರಿ ಶಾಲಿನೊಂದಿಗೆ ಬಂದ ವಿದ್ಯಾರ್ಥಿಗಳ ಗುಂಪು ಜೈಶ್ರೀರಾಮ್ ಘೋಷಣೆ ಕೂಗಿದ್ದು, ಈ ವೇಳೆ ನೀಲಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಭೀಮ್ ಘೋಷಣೆ ಕೂಗಿದ್ದಾರೆ. ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಬಳಿಕ ಕಾಲೇಜು ಪ್ರಾಂಶುಪಾಲರು ತರಗತಿಗಳಿಗೆ ರಜೆ ಘೋಷಿಸಿದರು.

Join Whatsapp
Exit mobile version