Home ಟಾಪ್ ಸುದ್ದಿಗಳು ಕ್ರಿಮಿನಲ್ ಮೇಲ್ಮನವಿಗಳು ಬಾಕಿ ಇರುವಾಗ ಆದ್ಯತೆಯ ವಿಚಾರಣೆಗೆ ಒತ್ತಾಯಿಸುವ ಕಾರ್ಪೊರೇಟ್ ವಲಯದ ಬಗ್ಗೆ ಸಿಜೆಐ ಅತೃಪ್ತಿ

ಕ್ರಿಮಿನಲ್ ಮೇಲ್ಮನವಿಗಳು ಬಾಕಿ ಇರುವಾಗ ಆದ್ಯತೆಯ ವಿಚಾರಣೆಗೆ ಒತ್ತಾಯಿಸುವ ಕಾರ್ಪೊರೇಟ್ ವಲಯದ ಬಗ್ಗೆ ಸಿಜೆಐ ಅತೃಪ್ತಿ

ನವದೆಹಲಿ: ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಕ್ರಿಮಿನಲ್ ಮೇಲ್ಮನವಿಗಳು ನ್ಯಾಯಾಲಯಕ್ಕೆ ಹೊರೆಯಾಗಿರುವಾಗ ವಾಣಿಜ್ಯ ಕಾನೂನು ಪ್ರಕರಣಗಳನ್ನು ಆದ್ಯತೆಯ ಮೇಲೆ ವಿಚಾರಣೆ ನಡೆಸುವಂತೆ ಬೃಹತ್ ಕಂಪೆನಿಗಳು ಪ್ರಸ್ತಾಪಿಸುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಸೋಮವಾರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ವ್ಯವಸ್ಥೆಯನ್ನು ಸುಗಮಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳುತ್ತಾ ಸಿಜೆಐ ರಮಣ ಅವರು, ಕಂಪನಿಗಳ ಪರವಾಗಿ ಪ್ರಕರಣಗಳನ್ನು ಉಲ್ಲೇಖಿಸಲು ನ್ಯಾಯಾಲಯಕ್ಕೆ ಹಾಜರಾದ ಹಿರಿಯ ನ್ಯಾಯವಾದಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.


“ನಾವು ಇನ್ನೂ ವ್ಯವಸ್ಥೆಯನ್ನು ಸುಗಮಗೊಳಿಸುತ್ತಿದ್ದೇವೆ. ಆಗಲೇ ಎಲ್ಲಾ ಕಾರ್ಪೊರೇಟ್ ಮಂದಿ ಬಂದು ಮನವಿಗಳನ್ನು ಹೇಗೆ ಸಲ್ಲಿಸಲು ಸಾಧ್ಯ? ಕ್ರಿಮಿನಲ್ ಮೇಲ್ಮನವಿಗಳು ಮತ್ತಿತರ ಪ್ರಕರಣಗಳು ಕೂಡ ಬಾಕಿ ಇವೆ” ಎಂದು ಅವರು ಹೇಳಿದರು.
ಸೆಪ್ಟೆಂಬರ್ 4, 2021 ರ ಹೊತ್ತಿಗೆ, ಒಟ್ಟು 69,956 ಪ್ರಕರಣಗಳು ಸುಪ್ರೀಂಕೋರ್ಟ್ನಲ್ಲಿ ಬಾಕಿ ಇವೆ. ಅದರಲ್ಲಿ 51,381 ಪ್ರವೇಶಾತಿ ಪ್ರಕರಣಗಳಾಗಿದ್ದು 18,575 ನಿಯಮಿತ ವಿಚಾರಣೆಯ ಪ್ರಕರಣಗಳಾಗಿವೆ. ಸುಪ್ರೀಂ ಕೋರ್ಟ್ನಲ್ಲಿ 446 ಸಾಂವಿಧಾನಿಕ ಅರ್ಜಿಗಳು ಬಾಕಿ ಉಳಿದಿದ್ದು ಅವುಗಳಲ್ಲಿ 49 ಮುಖ್ಯ ಪ್ರಕರಣಗಳಾಗಿದ್ದರೆ 397 ಸಂಬಂಧಿತ ಅರ್ಜಿಗಳಾಗಿವೆ.
Join Whatsapp
Exit mobile version