ರಿಯಾದ್: ಅತ್ಯುತ್ತಮ ಪ್ರತಿಭೆ ಹಾಗೂ ಕೌಶಲ್ಯ ಹೊಂದಿರುವವರಿಗೆ ದೇಶದ ಪೌರತ್ವ ನೀಡಲು ಸೌದಿ ಅರೇಬಿಯಾ ಮುಂದಾಗಿದೆ.
ದೇಶದ ವಿಷನ್- 2030 ಕಾರ್ಯತಂತ್ರಕ್ಕೆ ಅನುಗುಣವಾಗಿ, “ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕೆ ಪ್ರಯೋಜನವಾಗುವ ಮತ್ತು ಅಭಿವೃದ್ಧಿಯ ಕಾರ್ಯವನ್ನು ಉತ್ತೇಜಿಸಲು ಕೊಡುಗೆ ನೀಡುವ ಕಾನೂನು, ವೈದ್ಯಕೀಯ, ವೈಜ್ಞಾನಿಕ, ಸಾಂಸ್ಕೃತಿಕ, ಕ್ರೀಡೆ ಮತ್ತು ತಾಂತ್ರಿಕ ಕ್ಷೇತ್ರಗಳ ಪ್ರತಿಭೆಗಳಿಗೆ ದೇಶದ ಬಾಗಿಲು ತೆರೆಯಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಪೌರತ್ವ ನೀಡುವವರ ಪಟ್ಟಿಯನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ.