ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(CAA)- 2019 ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆ.19ಕ್ಕೆ ಮುಂದೂಡಿದೆ
ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರ ಪೀಠವು ಸಿಎಎಯನ್ನು ಪ್ರಶ್ನಿಸಿ ಕನಿಷ್ಠ 220 ಅರ್ಜಿಗಳನ್ನು ವಿಚಾರಣೆ ನಡೆಸಿದೆ.
ಸಿಎಎ ವಿರುದ್ಧದ ಅರ್ಜಿಗಳು ಮೊದಲ ಬಾರಿಗೆ ಡಿಸೆಂಬರ್ 18, 2019 ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಂದಿತ್ತು. ಡಿಸೆಂಬರ್ 11, 2019 ರಂದು ಸಂಸತ್ತು ಅಂಗೀಕರಿಸಿತ್ತು. ನಂತರ ಜನವರಿ 10, 2020 ರಿಂದ ಜಾರಿಗೆ ಬಂದಿತ್ತು.
NRC ಮತ್ತು CAA ಕಾಯ್ದೆಗಳನ್ನು ವಿರೋಧಿಸಿ ದೇಶದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿದ್ದವು.