Home ಟಾಪ್ ಸುದ್ದಿಗಳು ಗುವಾಹಟಿ ವಿಮಾನ ನಿಲ್ದಾಣದಲ್ಲಿ ವೃದ್ಧ ಮಹಿಳೆಯ ವಿವಸ್ತ್ರಗೊಳಿಸಿ ತಪಾಸಣೆ: CISF ಮಹಿಳಾ ಸಿಬ್ಬಂದಿ ಅಮಾನತು

ಗುವಾಹಟಿ ವಿಮಾನ ನಿಲ್ದಾಣದಲ್ಲಿ ವೃದ್ಧ ಮಹಿಳೆಯ ವಿವಸ್ತ್ರಗೊಳಿಸಿ ತಪಾಸಣೆ: CISF ಮಹಿಳಾ ಸಿಬ್ಬಂದಿ ಅಮಾನತು

ಅಸ್ಸಾಂ: ಗುವಾಹಟಿ ವಿಮಾನ ನಿಲ್ದಾಣದಲ್ಲಿ ವೃದ್ಧ ಮಹಿಳೆಯನ್ನು ವಿವಸ್ತ್ರಗೊಳಿಸಿ ತಪಾಸಣೆಗೈದ ಸಿಐಎಸ್ ಎಫ್ ನ ಮಹಿಳಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಹಿಪ್ ಇಂಪ್ಲಾಂಟ್‌ಗೆ ಒಳಗಾಗಿದ್ದ ವೃದ್ಧ ಮಹಿಳೆ ವೀಲ್‌ ಚೇರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿ ವಿವಸ್ತ್ರಗೊಳಿಸಿ ತಪಾಸಣೆಗೈದಿದ್ದಾರೆ. ವೃದ್ಧ ಮಹಿಳೆಯ ಮಗಳು ನೀಡಿದ ದೂರಿನ ಮೇರೆಗೆ ಮಹಿಳಾ ಪೇದೆಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ಗುವಾಹಟಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ತನ್ನ ಅಂಗವಿಕಲ ತಾಯಿಯನ್ನು ವಿವಸ್ತ್ರಗೊಳಿಸಿದ್ದಾರೆ ಎಂದು 80 ವರ್ಷದ ವೃದ್ಧೆಯ ಮಗಳು ಡಾಲಿ ಕಿಕಾನ್ ಗುರುವಾರ ಗುವಾಹಟಿ ವಿಮಾನ ನಿಲ್ದಾಣ ಸೇರಿದಂತೆ ಮುಖ್ಯಮಂತ್ರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.

ನನ್ನ ತಾಯಿಯ ಟೈಟಾನಿಯಂ ಸೊಂಟದ ಶಸ್ತ್ರಚಿಕಿತ್ಸೆಯ ಬಗ್ಗೆ ಭದ್ರತಾ ಸಿಬ್ಬಂದಿಗೆ ‘ಪುರಾವೆ’ ಬೇಕಿತ್ತು. ಅದಕ್ಕಾಗಿ ಆಕೆ ಬಟ್ಟೆ ಕಳಚುವಂತೆ ಬಲವಂತ ಮಾಡಿದ್ದಾರೆ. ಇದು ನಾವು ಹಿರಿಯರನ್ನು ನಡೆಸಿಕೊಳ್ಳುವ ಬಗೆ” ಎಂದು ಡಾಲಿ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು,

ಈ ಬಗ್ಗೆ ಸಿಐಎಸ್‌ಎಫ್ ಪ್ರತಿಕ್ರಿಯಿಸಿದ್ದು, ಕಷ್ಟದಲ್ಲಿರುವ ಪ್ರಯಾಣಿಕರ ಭದ್ರತೆ ಮತ್ತು ಘನತೆ ಕಾಪಾಡುವುದು ಎರಡೂ ಜತೆಯಾಗಿ ಸಾಗಬೇಕು ಎಂದಿದೆ. ಈ ಘಟನೆ ದುರದೃಷ್ಟಕರ, ಪ್ರಕರಣಕ್ಕೆ ಸಂಬಂಧಿಸಿದಂತೆ CISF ವಿಚಾರಣೆ ಆರಂಭಿಸಿದೆ. ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಟ್ವೀಟ್ ಮಾಡಿದೆ.

Join Whatsapp
Exit mobile version