Home ಟಾಪ್ ಸುದ್ದಿಗಳು ಕರಾವಳಿಯಾದ್ಯಂತ ಕ್ರೈಸ್ತರಿಂದ ಇಂದು ಮೊಂತಿ ಹಬ್ಬ ಆಚರಣೆ

ಕರಾವಳಿಯಾದ್ಯಂತ ಕ್ರೈಸ್ತರಿಂದ ಇಂದು ಮೊಂತಿ ಹಬ್ಬ ಆಚರಣೆ

ಮಂಗಳೂರು: ಕರಾವಳಿಯಾದ್ಯಂತ ಗುರುವಾರ ಕ್ರೈಸ್ತರು ಮೊಂತಿ ಹಬ್ಬವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಗುತ್ತಿದೆ.


ತೆನೆ ಹಬ್ಬವೆಂದೂ ಕರೆಯಲ್ಪಡುವ ಮೊಂತಿ ಫೆಸ್ಟ್ ಪ್ರಯುಕ್ತ ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ, ಹೊಸ ತೆನೆಯ ಆಶೀರ್ವಚನ, ವಿತರಣೆ, ಮೆರವಣಿಗೆ, ಪುಷ್ಪಾರ್ಚನೆಯ ಮೂಲಕ ಮೇರಿ ಮಾತೆಗೆ ನಮನ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಹಬ್ಬದ ಭೋಜನವನ್ನು ಮಾಡಲಾಗುತ್ತದೆ.


ಮೇರಿ ಮಾತೆಯ ಜನ್ಮದಿನವನ್ನು ಪ್ರಕೃತಿಯು ನೀಡಿರುವ ಕೊಡುಗೆಗಳಿಗಾಗಿ ಕೃತಜ್ಞತೆ ಸಲ್ಲಿಸುವ ದಿನವಾಗಿ ಮೊಂತಿ ಫೆಸ್ತ್ ಆಚರಿಸುವುದು ಈ ದಿನದ ವಿಶೇಷ. ಈ ಹಬ್ಬದಲ್ಲಿ ಹೊಸ ತೆನೆ, ನಾನಾ ಬಗೆಯ ಹೂವು, ಸಸ್ಯಹಾರಿ ಖಾದ್ಯಗಳಿಗೆ ವಿಶೇಷ ಆದ್ಯತೆ ಇರಲಿದೆ

Join Whatsapp
Exit mobile version