ಚಿತ್ರದುರ್ಗ: ಕ್ರಿಶ್ಚಿಯನ್ ಮನೆಯೊಂದಕ್ಕೆ ಅಕ್ರಮವಾಗಿ ನುಗ್ಗಿದ ಸಂಘಪರಿವಾರದ ಗೂಂಡಾಗಳು ಮನೆಯಲ್ಲಿರುವ ಬೈಬಲ್ ಸುಟ್ಟು ಹಾಕಿದ ಆಘಾತಕಾರಿ ಘಟನೆ ಜಿಲ್ಲೆಯ ಮಲ್ಲೇನು ಗ್ರಾಮದಲ್ಲಿ ನಡೆದಿದೆ.
ಮತಾಂತರ ಆರೋಪಿಸಿ ಮನೆಗೆ ದಾಳಿ ನಡೆಸಿದ ಸಂಘಪರಿವಾರದ ಕಾರ್ಯಕರ್ತರು ಬೈಬಲ್ ಸುಟ್ಟಿದ್ದು, ಅದನ್ನು ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ. ಮನೆಗೆ ಅತಿಕ್ರಮಿಸಿ ಪ್ರವೇಶಿಸಿದ್ದಲ್ಲದೆ ಏಕಾಂತಮ್ಮ ಎಂಬ 62 ರ ಹರೆಯದ ವೃದ್ಧೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.
ಮನೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ವೇಳೆ ಮನೆಗೆ ನುಗ್ಗಿದ ಗೂಂಡಾಗಳು ಬಲವಂತವಾಗಿ ಬೈಬಲ್ ಕಿತ್ತುತೊಂಡು ಅಂಗಳದಲ್ಲಿ ಸುಟ್ಟುಹಾಕಿದ್ದಾರೆ. ಮತ್ತು ನಿಮ್ಮ ಬೆಂಬಲಕ್ಕೆ ಯಾರಾದರೂ ಕ್ರಿಶ್ಚಿಯನ್ ಪಾದ್ರಿಗಳು ಬಂದರೆ ಅವರನ್ನೂ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಸಂತ್ರಸ್ತೆ ಮಹಿಳೆ ದೂರು ನೀಡದ ಕಾರಣ ಪೊಲೀಸರು ಕೇಸು ದಾಖಲಿಸಿಲ್ಲ ಎನ್ನಲಾಗಿದೆ