ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋಗೆ ಕ್ಲೀನ್‌ ಚಿಟ್

Prasthutha|

ಕೊಚ್ಚಿ: ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರು ನಿರಪರಾಧಿ ಎಂದು ಕೊಟ್ಟಾಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಘೋಷಿಸಿದೆ. ಸನ್ಯಾಸಿನಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

- Advertisement -

105 ದಿನಗಳ ವಿಚಾರಣೆಯ ನಂತರ ತೀರ್ಪು ಬಂದಿದ್ದು, ಸಾಕ್ಷ್ಯಾಧಾರದ ಕೊರತೆಯಿಂದ ಅವರನ್ನು ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಜಿ ಗೋಪಕುಮಾರ್ ಹೇಳಿದ್ದಾರೆ.ಇದೇ ವೇಳೆ ಕೊಟ್ಟಾಯಂ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯಿಂದ ನ್ಯಾಯಾಲಯವನ್ನು ಸುತ್ತುವರಿಯಲಾಗಿತ್ತು. ಬಾಂಬ್ ಮತ್ತು ಶ್ವಾನ ದಳಗಳು ನ್ಯಾಯಾಲಯದ ಆವರಣದಲ್ಲಿ ತಪಾಸಣೆ ನಡೆಸಿವೆ. ನ್ಯಾಯಾಲಯದ ಆವರಣದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.

ಬಿಷಪ್ ವಿರುದ್ಧದ ಅತ್ಯಾಚಾರ ಪ್ರಕರಣವನ್ನು 2018 ರಲ್ಲಿ ಕೊಟ್ಟಾಯಂ ಜಿಲ್ಲೆಯಲ್ಲಿ ಪೊಲೀಸರು ದಾಖಲಿಸಿದ್ದಾರೆ ಮತ್ತು ಮುಲಕ್ಕಲ್ ಅವರನ್ನು ಅತ್ಯಾಚಾರ ಆರೋಪದ ಮೇಲೆ ಸೆಪ್ಟೆಂಬರ್ 21, 2018 ರಂದು ಬಂಧಿಸಲಾಯಿತು. ಜೂನ್ 2018 ರಲ್ಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ಮಿಷನರೀಸ್ ಆಫ್ ಜೀಸಸ್ ಸಭೆಗೆ ಸೇರಿದ ಸನ್ಯಾಸಿನಿ, ರೋಮನ್ ಕ್ಯಾಥೋಲಿಕ್ ಚರ್ಚ್‌ನ ಜಲಂಧರ್ ಡಯಾಸಿಸ್‌ನ ಆಗಿನ ಬಿಷಪ್ ಫ್ರಾಂಕೊ ತನ್ನನ್ನು ಲೈಂಗಿಕ ಕಿರುಕುಳಕ್ಕೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Join Whatsapp