Home ಟಾಪ್ ಸುದ್ದಿಗಳು ಕ್ರಿಸ್ ಹಿಪ್ಕಿನ್ಸ್ ನ್ಯೂಜಿಲ್ಯಾಂಡ್’ನ 41ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ

ಕ್ರಿಸ್ ಹಿಪ್ಕಿನ್ಸ್ ನ್ಯೂಜಿಲ್ಯಾಂಡ್’ನ 41ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್’ನ 41ನೇ ಪ್ರಧಾನಿಯಾಗಿ 44ರ ಪ್ರಾಯದ ಕ್ರಿಸ್ ಹಿಪ್ಕಿನ್ಸ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಗವರ್ನರ್ ಜನರಲ್ ಸಿಂಡಿ ಕಿರೋ ಪ್ರಮಾಣ ವಚನ ಬೋಧಿಸಿದರು.


ಇದೇ ಸಂದರ್ಭದಲ್ಲಿ ಕಾರ್ಮೆಲ್ ಸೆಫಿಲೋನೈ ಉಪ ಪ್ರಧಾನಿಯಾಗಿ ಅಧಿಕಾರ ಪ್ರಮಾಣ ಸ್ವೀಕರಿಸಿದರು.


ಜನವರಿ 19ರಂದು ಪ್ರಧಾನಿಯಾಗಿದ್ದ ಜೆಸಿಂದ ಆರ್ಡೆನ್ ದಿಢೀರ್ ರಾಜೀನಾಮೆ ನೀಡಿದ ಬಳಿಕ ಲೇಬರ್ ಪಕ್ಷದ ಸಂಸದೀಯ ಪಕ್ಷವು ಕ್ರಿಸ್ ಹಿಪ್ಕಿನ್ಸ್ರನ್ನು ಪ್ರಧಾನಿ ಪದವಿಗೆ ಆಯ್ಕೆ ಮಾಡಿತ್ತು.
ಹಿಂದೆ ಶಿಕ್ಷಣ ಮತ್ತು ಪೊಲೀಸ್ ಮಂತ್ರಿಯಾಗಿದ್ದ ಕ್ರಿಸ್ ಹಿಪ್ಕಿನ್ಸ್ ಕೊರೋನಾ ಕಾಲದ ನಾಯಕರಾಗಿ ಹೆಸರು ಮಾಡಿದ್ದರು. ಇದು ನನಗೆ ಉನ್ನತ ಗೌರವ ಹಾಗೂ ದೊಡ್ಡ ಜವಾಬ್ದಾರಿ ಎಂದು ಕ್ರಿಸ್ ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version