Home ಟಾಪ್ ಸುದ್ದಿಗಳು ಚೀನಾ ವೀಸಾ ಹಗರಣ: ಕಾರ್ತಿ ಚಿದಂಬರಂ, ಇತರರ ವಿರುದ್ಧ ಇಡಿ ಇಲಾಖೆಯಿಂದ ಪ್ರಕರಣ ದಾಖಲು

ಚೀನಾ ವೀಸಾ ಹಗರಣ: ಕಾರ್ತಿ ಚಿದಂಬರಂ, ಇತರರ ವಿರುದ್ಧ ಇಡಿ ಇಲಾಖೆಯಿಂದ ಪ್ರಕರಣ ದಾಖಲು

ನವದೆಹಲಿ: 2011 ರಲ್ಲಿ ಪಿ. ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ 263 ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮತ್ತು ಇತರರ ವಿರುದ್ಧ ಇಡಿ ಇಲಾಖೆ ಅಕ್ರಮ ಹಣ ವರ್ಗಾವಣಾ ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಸಿಬಿಐನ ಎಫ್.ಐ.ಆರ್. ವರದಿಯನ್ನು ಆಧರಿಸಿ ಇಡಿ ಇಲಾಖೆಯು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಿದೆ ಎಂದು ತಿಳಿಸಿದೆ.

ಪಂಜಾಬ್ ನಲ್ಲಿ ಪವರ್ ಪ್ಲಾಂಟ್ ಸ್ಥಾಪಿಸುತ್ತಿರುವ ವೇದಾಂತ ಗ್ರೂಪ್ ಕಂಪೆನಿಯ ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ ನ ಉನ್ನತ ಕಾರ್ಯನಿರ್ವಾಹಕರಿಂದ ಕಾರ್ತಿ ಮತ್ತು ಅವರ ನಿಕಟವರ್ತಿ ಎಸ್. ಭಾಸ್ಕರ್ ರಾಮನ್ ಅವರು 50 ಲಕ್ಷ ರೂ. ಲಂಚವನ್ನು ಪಡೆದಿದ್ದಾರೆ ಎಂದು ಸಿಬಿಐ ಪ್ರಕರಣ ದಾಖಲಿಸಿತ್ತು.

ತನಿಖೆಯ ಭಾಗವಾಗಿ ಪ್ರಕರಣದ ಎಲ್ಲಾ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸಿಬಿಐ ತಿಳಿಸಿದೆ. ಸದ್ಯ ಈ ಆರೋಪಗಳನ್ನು ಕಾರ್ತಿ ಚಿದಂಬರಂ ನಿರಾಕರಿಸಿದ್ದಾರೆ.

Join Whatsapp
Exit mobile version