Home ಟಾಪ್ ಸುದ್ದಿಗಳು ಚಂದ್ರನ ಮೇಲೆ ಧ್ವಜ ನೆಟ್ಟ ಎರಡನೇ ರಾಷ್ಟ್ರವಾಗಿ ಚೀನಾದ ಸಾಧನೆ

ಚಂದ್ರನ ಮೇಲೆ ಧ್ವಜ ನೆಟ್ಟ ಎರಡನೇ ರಾಷ್ಟ್ರವಾಗಿ ಚೀನಾದ ಸಾಧನೆ

ಬೀಜಿಂಗ್ : ಚಂದ್ರನ ಮೇಲೆ ಧ್ವಜ ನೆಟ್ಟ ಎರಡನೇ ರಾಷ್ಟ್ರವಾಗಿ ಚೀನಾ ದಾಖಲೆ ಸಾಧಿಸಿದೆ. ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ ಮೊದಲ ದೇಶವಾಗಿ ಅಮೆರಿಕ ಸಾಧನೆ 1969ರಲ್ಲೇ ಮಾಡಿತ್ತು.

ಅಮೆರಿಕದ ಅಪೋಲೊ ಮಿಶನ್ 1969ರಲ್ಲಿ ಮೊದಲ ಬಾರಿ ಚಂದ್ರನ ಮೇಲೆ ಧ್ವಜ ನೆಟ್ಟಿತ್ತು. ಈಗ ಚೀನಾ ತನ್ನ ಬಾಹ್ಯಾಕಾಶ ನೌಕೆಯ ಮೂಲಕವೇ ಧ್ವಜ ನೆಟ್ಟಿದೆ. ಈ ಬಗ್ಗೆ ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿಎಸ್ ಎನ್ ಎ) ಫೋಟೊಗಳನ್ನು ಬಿಡುಗಡೆಗೊಳಿಸಿದೆ.

ಚೀನಾದ ಬಾಹ್ಯಾಕಾಶ ನೌಕೆ ನ.23ರಂದು ಚಂದ್ರನ ಮೇಲ್ಮೈ ಮೇಲೆ ಇಳಿದಿತ್ತು. 21ನೇ ಶತಮಾನದಲ್ಲಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಮೂರನೇ ಬಾಹ್ಯಾಕಾಶ ನೌಕೆಯಾಗಿ ಚೀನಾದ ನೌಕೆ ಗುರುತಿಸಲ್ಪಟ್ಟಿದೆ.   

Join Whatsapp
Exit mobile version