ಬೀಜಿಂಗ್: ಸತತ ಐದನೇ ವರ್ಷವೂ ಜನನ ದರ ಕುಸಿತದಿಂದಾಗಿ ಚೀನಾದ ಜನಸಂಖ್ಯೆ ಪ್ರಮಾಣ ಕೇವಲ 4.8 ಲಕ್ಷ ಮಾತ್ರ ಏರಿಕೆಯಾಗಿದೆ.
2020ರಲ್ಲಿ 141.20 ಕೋಟಿ ಇದ್ದ ಜನಸಂಖ್ಯೆಯು 2021ರಲ್ಲಿ 141.26 ಕೋಟಿಗೆ ಏರಿತ್ತು. ಕಳೆದ ವರ್ಷದ ಜನನ ಪ್ರಮಾಣ ಸಾವಿರಕ್ಕೆ ಶೇ. 7.52 ಮತ್ತು ಸಾವಿನ ಪ್ರಮಾಣ ಶೇ. 7.18 ಆಗಿತ್ತು.
ಅಂದರೆ, ನೈಸರ್ಗಿಕ ಜನಸಂಖ್ಯೆಯ ಹೆಚ್ಚಳವು ಪ್ರತಿ 1000 ಕ್ಕೆ ಕೇವಲ 0.34 ಆಗಿದೆ. ಇದು ಮೊದಲ ಬಾರಿಗೆ ಪ್ರತಿ 10 ಸಾವಿನ ಸಂಖ್ಯೆಗೆ 1 ಜನನ ಎಂಬಂತೆ ಇಳಿಕೆಯಾಗುತ್ತಿದೆ. 3 ಮಕ್ಕಳ ನೀತಿಯನ್ನು ಅನುಸರಿಸಿ ಜನಸಂಖ್ಯೆ ಹೆಚ್ಚಳವಾಗದಿದ್ದಲ್ಲಿ 2021ರ ಜನಸಂಖ್ಯೆಯನ್ನು ಗರಿಷ್ಠ ಎಂದು ದಾಖಲಿಸಲಾಗುತ್ತದೆ. 2016 ರಲ್ಲಿ ಒಂದು ಮಗು ಎಂಬ ನೀತಿಯನ್ನು ಬದಲಾಯಿಸಿ 2 ಮಕ್ಕಳವರೆಗೂ ಆಗಬಹುದು ಎಂದು ವಿಸ್ತರಿಸಲಾಯಿತು.