ಬೆಂಗಳೂರು: ಆರ್ಥಿಕತೆ ಮತ್ತು ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಲಡಾಖ್‌ನಲ್ಲಿ ಚೀನಾದ ಅತಿಕ್ರಮಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿರುವ ಅವರು, ‘ಲಡಾಖ್‌ನಲ್ಲಿ ನಮ್ಮ ರಕ್ಷಣಾ ನೀತಿಯನ್ನು ನೋಡಿದರೆ ಹಿಮಾಲಯನ್ ವೈಫಲ್ಯದಂತಿದೆ’ ಎಂದಿದ್ದಾರೆ . ವಿಫಲಗೊಂಡಿರುವ ನೀತಿಗಳನ್ನು ರಿಸೆಟ್ ಮಾಡಲು ಸಹಾಯಕ್ಕೆ ಸಿದ್ಧನಿದ್ದೇನೆ ಆದರೆ ಸೊಕ್ಕು ಅಡ್ಡಿಯಾಗಿದೆ ‘ ಎಂದು ಸಬ್ರಮಣಿಯನ್ ಸ್ವಾಮಿ ಟೀಟ್ ಮಾಡಿದ್ದಾರೆ .
ಸಾಮಾಜಿಕ ಜಾಲತಾಣಗಳಲ್ಲಿ ಸಲಹೆ ನೀಡುವುದನ್ನು ಬಿಟ್ಟು ಸರ್ಕಾರಕ್ಕೆ ನೇರವಾಗಿ ಸಲಹೆ ನೀಡುವುದು ಉತ್ತಮ ಎಂದು ಕುಮಾರ್ ರಾಜ್‌ಪುತ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರ ಕಮೆಂಟ್‌ಗೆ ಪ್ರತಿಕ್ರಿಯಿಸಿದ ಸ್ವಾಮಿ , ‘2014 ರಿಂದ 2019 ರ ವರೆಗೆ ಈ ಕೆಲಸವನ್ನು ಮಾಡಿದ್ದೇನೆ. ಆದರೆ ಅವರು ಜ್ಞಾನದ ಪುರಾವೆಯನ್ನು ವಾಟರ್ ಪ್ರೊಫ್‌ನಂತೆ ನೋಡುತ್ತಾರೆ ‘ ಎಂದಿದ್ದಾರೆ .
ಇದೇ ವೇಳೆ ಹಿಂದುಗಳ ರಕ್ಷಣೆಯನ್ನು ಸರ್ಕಾರ ಮಾಡುತ್ತದೆ ಎಂಬ ಕಮೆಂಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ , ‘ ಅಮಿತ್ ಶಾ ಅವರ ಆಶೀರ್ವಾದದೊಂದಿಗೆ ಆಡಳಿತ ನಡೆಸುತ್ತಿರುವ ಉತ್ತರಾಖಂಡದ ಬಿಜೆಪಿ ಸರ್ಕಾರ 52 ಪ್ರಮುಖ ದೇವಸ್ಥಾನಗಳನ್ನು ಕೈಬಿಟ್ಟಿಲ್ಲವೇ ? ಇದು ಹಿಂದುಗಳಿಗೆ ಸಂಪೂರ್ಣ ವಿರುದ್ಧ ಎಂದಿದ್ದಾರೆ .