Home ಟಾಪ್ ಸುದ್ದಿಗಳು ಗಾಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜಾರೋಹಣ: ಮೌನಕ್ಕೆ ಜಾರಿದ ಮೋದಿ ವಿರುದ್ಧ ವ್ಯಾಪಕ ಆಕ್ರೋಶ

ಗಾಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜಾರೋಹಣ: ಮೌನಕ್ಕೆ ಜಾರಿದ ಮೋದಿ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: 2022ರ ಜನವರಿ 1 ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜಾರೋಹಣ ನಡೆಸಿರುವ ವಿಡಿಯೋವನ್ನು ತನ್ನ ಅಧಿಕೃತ ಮಾಧ್ಯಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಿಸಿದ ನಂತರ ವಿವಾದ ಭುಗಿಲೆದ್ದಿದೆ. ಈ ಕುರಿತು ಮೋದಿ ಮತ್ತೆ ಮೌನ ವಹಿಸಲಿದ್ದಾರೆಯೇ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವಾರು ಮಂದಿ ದೇಶಪ್ರೇಮಿಗಳು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“2022 ರ ಹೊಸ ವರ್ಷದ ದಿನದಂದು ಗಾಲ್ವಾನ್ ಕಣಿವೆಯ ಮೇಲೆ ಚೀನಾದ ರಾಷ್ಟ್ರೀಯ ಧ್ವಜಾರೋಹಣ. ಈ ಧ್ವಜವು ಒಮ್ಮೆ ಬೀಜಿಂಗ್‌ನ ಟಿಯಾನನ್‌ಮೆನ್ ಚೌಕದ ಮೇಲೆ ಹಾರಿದ್ದರಿಂದ ವಿಶೇಷವಾಗಿದೆ” ಎಂದು ಚೀನಾ ಟ್ವೀಟ್ ಮಾಡಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಖರ್ಗೆಯವರು, “ಗಾಲ್ವಾನ್‌ಗಾಗಿ ಹೋರಾಡಿ 20 ಸೈನಿಕರು ಹುತಾತ್ಮರಾಗಿದ್ದಾರೆ. ಆದರೂ ಹೊಸ ವರ್ಷದ ಮುನ್ನಾದಿನದಂದು ಗಾಲ್ವಾನ್ ಕಣಿವೆಯಲ್ಲಿ ತಮ್ಮ ಧ್ವಜವನ್ನು ಹಾರಿಸಿರುವುದಾಗಿ ಚೀನಾವು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವಾಗ ಭಾರತೀಯ ಸರ್ಕಾರ ಮೂಕ ಪ್ರೇಕ್ಷಕರಾಗಿ ಉಳಿಯಲು ನಿರ್ಧರಿಸಿದೆ. ಪ್ರಧಾನಿ ಮೋದಿ ಮತ್ತೆ ಚೀನಾದ ಹೆಸರನ್ನು ಎತ್ತುವುದಿಲ್ಲ ಮತ್ತು ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟಿಕೊಳ್ಳುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ 2020ರ ಜೂನ್‌ 15ರಂದು ಭಾರತೀಯ ಮತ್ತು ಚೀನಿ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತೀಯ 20 ಸೈನಿಕರು ಸಾವನ್ನಪ್ಪಿದ್ದಾರೆ. ಚೀನಾ ತಮ್ಮ 04 ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದೆ.

Join Whatsapp
Exit mobile version