ಬೀಜಿಂಗ್: ಚೀನಾದ ಚೋಂಗ್ ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಟಿಬೆಟ್ ಏರ್‌ಲೈನ್ಸ್‌ನ ವಿಮಾನವೊಂದು ಟೇಕ್ ಆಫ್ ಆಗುವ ವೇಳೆ ರನ್‌ವೇನಲ್ಲಿ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ವಿಮಾನದಲ್ಲಿ 113 ಪ್ರಯಾಣಿಕರು ಹಾಗೂ 9 ಜನ ಸಿಬ್ಬಂದಿ ಇದ್ದರು.. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ. ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಏರ್‌ಬಸ್ ಎ319 ಹೆಸರಿನ ಈ ವಿಮಾನ ಚೋಂಗ್‌ಕಿಂಗ್‌ನಿಂದ ಟಿಬೆಟ್‌ನ ರಾಜಧಾನಿ ಲ್ಹಾಸಾಗೆ ತೆರಳುತಿತ್ತು. ದುರ್ಘಟನೆಯ ವಿಡಿಯೊ ವಿಮಾನ ನಿಲ್ದಾಣದ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಳೆದ ತಿಂಗಳಷ್ಟೇ ಚೀನಾದ ‘ಚೀನಾ ಈಸ್ಟರ್ನ್ ಏಲ್‌ಲೈನ್ಸ್’ ವಿಮಾನವೊಂದು ಗುಡ್ಡಗಾಡು ಪ್ರದೇಶದಲ್ಲಿ ಅಪಘಾತಕ್ಕೆ ಈಡಾಗಿ 132 ಜನ ಮೃತಪಟ್ಟಿದ್ದರು. ವಿಚಿತ್ರವೆಂದರೆ ಈ ದುರಂತಕ್ಕೆ ಈವರೆಗೂ ಅಧಿಕೃತ ಕಾರಣಗಳು ತಿಳಿದು ಬಂದಿಲ್ಲ.