ಚಿಲ್ ಡೊನಾಲ್ಡ್ ಚಿಲ್! : 11 ತಿಂಗಳ ಬಳಿಕ ಸೇಡು ತೀರಿಸಿಕೊಂಡ ಗ್ರೇಟಾ ಥನ್ಬರ್ಗ್

Prasthutha: November 6, 2020

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ 11 ತಿಂಗಳ ಹಿಂದೆಯಷ್ಟೇ ಟ್ರೋಲ್ ಗೊಳಗಾಗಿದ್ದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್, ಇದೀಗ ಸೋಲಿನ ಅಂಚಿನಲ್ಲಿರುವ ಟ್ರಂಪ್ ವಿರುದ್ಧ ಅವರದೇ ಶೈಲಿಯಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಅಂದು ಟ್ರಂಪ್ ತಮ್ಮ ವಿರುದ್ಧ ಬಳಸಿದ ಪದಗಳನ್ನೇ ಬಳಸಿದ ಥನ್ಬರ್ಗ್, ಸೋಲಿನ ಅಂಚಿನಲ್ಲಿರುವ ಟ್ರಂಪ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

2019ರ ಟೈಮ್ ಮ್ಯಾಗಜಿನ್ ನ ವರ್ಷದ ವ್ಯಕ್ತಿಯಾಗಿ ಗ್ರೇಟಾ ಥನ್ಬರ್ಗ್ ಆಯ್ಕೆಯಾಗಿದ್ದರು. ಸಾವಿರಾರು ಜನ ಅವರಿಗೆ ಅಭಿನಂದನೆ ತಿಳಿಸಿದ್ದರು. ಆದರೆ, “ನಿನ್ನ ಅಹಂಕಾರ ಬಿಡು’’ ಎಂದು ಟ್ರಂಪ್ ಟ್ವೀಟ್ ಮಾಡಿ ಅವಮಾನಿಸಿದ್ದರು.

ಇದಕ್ಕೆ ಉತ್ತರಿಸಲು 11 ತಿಂಗಳಿನಿಂದ ಕಾದಿದ್ದ ಥನ್ಬರ್ಗ್, “ಮತ ಎಣಿಕೆ ನಿಲ್ಲಿಸಿ” ಎಂದು ಟ್ರಂಪ್ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿ, ಅಂದು ಟ್ರಂಪ್ ಬಳಸಿದ್ದ ಪದಗಳನ್ನೇ ಬಳಸಿ ಸೇಡು ತೀರಿಸಿಕೊಂಡಿದ್ದಾರೆ.

“ಎಷ್ಟೊಂದು ಹಾಸ್ಯಾಸ್ಪದ. ಡೊನಾಲ್ಡ್ ತಮ್ಮ ಕೋಪ ನಿರ್ವಹಣಾ ಸಮಸ್ಯೆಯ ಬಗ್ಗೆ ಕೆಲಸ ಮಾಡಬೇಕು, ನಂತರ ಒಬ್ಬ ಸ್ನೇಹಿತನೊಂದಿಗೆ ಹಳೆಯ ಶೈಲಿಯ ಸಿನೆಮಾಗೆ ಹೋಗಬೇಕು! ಚಿಲ್, ಡೊನಾಲ್ಡ್ ಚಿಲ್!!’’ ಎಂದು ಗ್ರೇಟಾ ಥನ್ಬರ್ಗ್ ಟ್ವೀಟ್ ಮಾಡಿದ್ದಾರೆ.

ಥನ್ಬರ್ಗ್ ಅವರ ಈ ಟ್ವೀಟ್ ಗೆ 12 ಲಕ್ಷ ಲೈಕ್ ಬಂದಿದೆ, ಲಕ್ಷಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದಾರೆ. ಇದೇ ರೀತಿ 11 ತಿಂಗಳ ಹಿಂದೆ ಟ್ರಂಪ್ ಟ್ವೀಟ್ ಮಾಡಿದ್ದಾಗ 2 ಲಕ್ಷ ಲೈಕ್ ಬಂದಿತ್ತು.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!