Home ಟಾಪ್ ಸುದ್ದಿಗಳು ಮಕ್ಕಳು ತೆರಿಗೆ ಕಟ್ಟಿದ್ರೆ, ತಾಯಿಗೆ ಇಲ್ಲ ಗೃಹಲಕ್ಷ್ಮೀ ಸೌಲಭ್ಯ: ಲಕ್ಷ್ಮೀ ಹೆಬ್ಬಾಳ್ಕರ್

ಮಕ್ಕಳು ತೆರಿಗೆ ಕಟ್ಟಿದ್ರೆ, ತಾಯಿಗೆ ಇಲ್ಲ ಗೃಹಲಕ್ಷ್ಮೀ ಸೌಲಭ್ಯ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು : ಮಕ್ಕಳು ತೆರಿಗೆ ಪಾವತಿ ಮಾಡುತ್ತಿದ್ದರೆ ಅಂತಹ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮಾಸಿಕ 2000 ರೂಪಾಯಿ ಸೌಲಭ್ಯ ಸಿಗೋದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಪತಿಯು ಆದಾಯ ತೆರಿಗೆ ಪಾವತಿದಾರನಾದರೆ ಪತ್ನಿಗೆ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಸಿಗೋದಿಲ್ಲ ಎಂದು ಹೇಳಿತ್ತು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಂದು ಷರತ್ತಿನ ಬಗ್ಗೆ ಹೇಳಿದ್ದು ರಾಜ್ಯದ ಜನತೆಯಲ್ಲಿ ಗೊಂದಲ ಮೂಡಿಸಿದೆ, ಬೆಂಗಳೂರಿನಲ್ಲಿ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆ ಸಂಬಂಧ ಇಲಾಖೆ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆಯಲ್ಲಿ ಭಾಗಿಯಾದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಈ ಹೇಳಿಕೆ ನೀಡಿದ್ದಾರೆ .

Join Whatsapp
Exit mobile version