Home Uncategorized ಮಕ್ಕಳು ಕಲಿಯಲಿಕ್ಕೆ ಶಾಲೆಗೆ ಬರುತ್ತಿದ್ದಾರೆ ಹೊರತು ಶೂ ಸಾಕ್ಸ್ ಗೆ ಅಲ್ಲ: ಬಿ.ಸಿ.ನಾಗೇಶ್

ಮಕ್ಕಳು ಕಲಿಯಲಿಕ್ಕೆ ಶಾಲೆಗೆ ಬರುತ್ತಿದ್ದಾರೆ ಹೊರತು ಶೂ ಸಾಕ್ಸ್ ಗೆ ಅಲ್ಲ: ಬಿ.ಸಿ.ನಾಗೇಶ್

ಕಲಬುರಗಿ: ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೆ ಹೊರತು ಶೂ, ಸಾಕ್ಸ್‌ ಹಾಕಿಕೊಳ್ಳಲು ಅಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ‌ ಬಿ.ಸಿ.ನಾಗೇಶ್ ಹೇಳಿದ್ದಾರೆ.

‘ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಇಲ್ಲ’ ಎಂಬ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ ಟ್ವೀಟ್‌ಗೆ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಬಿ.ಸಿ‌.ನಾಗೇಶ್ ‘ಶೂ, ಸಾಕ್ಸ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಎಂತಹ ಗುಣಮಟ್ಟದ ಶಿಕ್ಷಣ ನೀಡಿದ್ದರು? ಎಷ್ಟು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದರು? ಎಷ್ಟು ಶಾಲೆಗೆ ಹೊಸ ಕೊಠಡಿ ಕೊಟ್ಟಿದ್ದರು? ಶಿಕ್ಷಣಕ್ಕೆ ಎಷ್ಟು ಅನುದಾನ ನೀಡಿದ್ದರು ಎಂಬುದರ ಬಗ್ಗೆ ದಾಖಲೆ ನೀಡಲಿ. ನಮ್ಮ ಸರ್ಕಾರದ ಅವಧಿಯಲ್ಲಿನ ದಾಖಲೆಪತ್ರಗಳನ್ನೂ ಬಿಡುಗಡೆ ಮಾಡುತ್ತೇವೆ ಎಂದು ಅವರು ಸವಾಲು ಹಾಕಿದರು.

ಶೂ, ಸಾಕ್ಸ್ ಕೊಡುತ್ತಿಲ್ಲ ಎಂಬುದು ಸಿದ್ದರಾಮಯ್ಯ ಅವರ 101ನೇ ಸುಳ್ಳು. ಕಲಿಕಾ ಚೇತರಿಕೆಗೆ ₹150 ಕೋಟಿ ಖರ್ಚು ಮಾಡಲಾಗಿದೆ. ಮಳೆಯಿಂದ ಹಲವು ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಹೀಗಾಗಿ, 7 ಸಾವಿರ ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ’ ಎಂದು ನಾಗೇಶ್ ಹೇಳಿದರು.

Join Whatsapp
Exit mobile version