ಮಂಗಳೂರು : ಅಂತರಾಷ್ಟೀಯ ಟೈಕಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಬಂಟ್ವಾಳ ತಾಲೂಕಿನ ಅಕ್ಕರಂಗಡಿ ನಿವಾಸಿ ಆಯಿಷಾ ಝೊಹರಳನ್ನು ಭಯೋತ್ಪಾದಕಿ ಎಂದು ನಿಂದಿಸಿರುವ ಹರಿ ಹನುಮಾನ್ ದಾಸ್ ಎಂಬಾತನ ಕೃತ್ಯವನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಸಂಘಟನೆ ತೀವ್ರವಾಗಿ ಖಂಡಿಸಿದೆ. ಆರೋಪಿ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಮ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ನೌರಿನ್ ಆಲಂಪಾಡಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಗೋವಾ ರಾಜ್ಯದ ಮಾಫ್ಸ ಎಂಬಲ್ಲಿ ನಡೆದ ಅಂತರಾಷ್ಟೀಯ ಟೈಕಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಬಂಟ್ವಾಳ ತಾಲೂಕಿನ ಅಕ್ಕರಂಗಡಿ ನಿವಾಸಿ ಆಯಿಷಾ ಝೊಹರ ರವರ ಪ್ರಗತಿಯನ್ನು ಸಹಿಸದ ಸಂಘೀ ಮನಸ್ಥಿತಿಯ ಹರಿ ಹನುಮಾನ್ ದಾಸ್ ಎನ್ನುವವನೊಬ್ಬ ತನ್ನ ಫೇಸ್ ಬುಕ್ ಕಾಮೆಂಟ್ ಪೇಜಿನಲ್ಲಿ ಮಗುವನ್ನು”ನಾಳಿನ ಭಯೋತ್ಪಾದಕಿ” ಎಂದು ಗೀಚಿದ್ದಾನೆ. ಹೆಣ್ಣು ಮಗುವಿನ ಯಶಸ್ಸನ್ನು ಅರಗಿಸಲಾರದೆ ದೇಶಕ್ಕೆ ಕೀರ್ತಿ ತಂದ ಬಾಲಕಿಯನ್ನು ಭಯೋತ್ಪಾದಕಿ ಎಂದು ನಿಂದಿಸಿ ಅವಮಾನಿಸಿರುವುದಲ್ಲದೆ ಸಾಮಾಜಿಕ ಸ್ವಸ್ತ್ಯ ಕದಡಲು ಕಾರಣವಾಗಿರುತ್ತಾನೆ. ದೇಶದಲ್ಲಿ ಮುಸ್ಲಿಂರ ಪ್ರಗತಿಯನ್ನು ಚಿವುಟಲು ಪ್ರತೀ ಸಲ ಪಾಕಿಸ್ತಾನಿಗಳು, ಭಯೋತ್ಪಾದಕರು ಎಂದು ನಿಂದಿಸುವುದಲ್ಲದೆ ಜಾತಿ ತಾರತಮ್ಯವನ್ನು ಮಾಡಲಾಗುತ್ತಿದೆ. ಇದು ಒಂದು ಮಗುವಿಗೆ ಮಾಡಿದ ಅವಮಾನವಲ್ಲ, ದೇಶದ ಎಲ್ಲಾ ಮಕ್ಕಳಿಗೂ ಮಾಡಿದ ಅವಮಾನವಾಗಿರುತ್ತದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಬಂಟ್ವಾಳ ಪೊಲೀಸರು ಕೂಡಲೇ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.