Home ಕರಾವಳಿ ಮಂಗಳೂರಿನಲ್ಲಿ ಮಗು ಮಾರಾಟ ಜಾಲ ಪತ್ತೆ । ಮೂಲ್ಕಿ ಮೂಲದ ಯುವಕನ ಬಂಧನ !

ಮಂಗಳೂರಿನಲ್ಲಿ ಮಗು ಮಾರಾಟ ಜಾಲ ಪತ್ತೆ । ಮೂಲ್ಕಿ ಮೂಲದ ಯುವಕನ ಬಂಧನ !

ಮಂಗಳೂರು : ಮಕ್ಕಳಿಲ್ಲದವರಿಗೆ ಮಗುವನ್ನು ಮಾರಾಟ ಮಾಡುವ ಜಾಲವೊಂದು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಮಂಗಳೂರು ಪೋಲಿಸರು ಪ್ರಕರಣವನ್ನು ಭೇದಿಸುವಲ್ಲಿ ಯಸಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದು, ಆರೋಪಿಯನ್ನು ರಾಯಲ್ ಚಿಕನ್ ಫಾರ್ಮ್ ಇದರ ಮಾಲಿಕ ಮೂಲ್ಕಿ ಪರಿಸರದ ರ್ಯಾ ನ್ ಸೋನ್ಸ್ ಎಂದು ಗುರುತಿಸಲಾಗಿದೆ .


ಮಂಗಳೂರಿನಲ್ಲಿ ಮಗು ಮಾರಾಟ ಮಾಡುವ ಬಗ್ಗೆ ಮೈಸೂರಿನ ಸಂಸ್ಥೆಯೊಂದಕ್ಕೆ ಮಾಹಿತಿ ದೊರಕಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಸಂಸ್ಥೆಯ ಸಿಬ್ಬಂಧಿಯೋರ್ವ ಜಾಣ್ಮೆಯಿಂದ ಮಾರಾಟದ ಬಗ್ಗೆ ಮತುಕತೆ ನಡೆಸಿದ್ದಾರೆ. ಎಲ್ಲಾ ವಿವರವನ್ನು ಪಡೆದು ಸಂಸ್ಥೆಯು ಮಂಗಳೂರಿನ ಪೋಲಿಸರಿಗೆ ವಿಚಾರವನ್ನು ತಿಳಿಸಿದ್ದಾರೆ. ಆ ಬಳಿಕ ಪೋಲಿಸರು ಕಾರ್ಯಪ್ರವೃತ್ತಗೊಂಡು, ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಇದರಿಂದಾಗಿ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು , ಜಾಲವು ಮಕ್ಕಳ ಮೇಲೆ ಫಿಕ್ಸ್ ಮಾಡುತ್ತಿದ್ದ ಹಣದ ಮೊತ್ತವೂ ಬಯಲಿಗೆ ಬಂದಿದೆ. ಗಂಡು ಮಗುವಿಗೆ 6 ಲಕ್ಷ ರೂ , ಹೆಣ್ಣು ಮಗುವಿಗೆ 4 ಲಕ್ಷ ರೂಪಯಿಯಂತೆ ನಿಗದಿಪಡಿಸಲಾಗಿತ್ತು. ಮುಂಗಡ ಹನದ ರೂಪದಲ್ಲಿ ಒಂದಿಷ್ಟು ಹಣವನ್ನು ನೀಡಿದರಷ್ಟೆ ಮಗುವನ್ನು ನೀಡುವ ಪ್ರಕ್ರಿಯೆಗಳು ನಡೆಯುತ್ತಿತ್ತು ಎನ್ನಲಾಗಿದೆ

Join Whatsapp
Exit mobile version