ಲಕ್ನೋ: ಕಳೆದ ವಾರ ರೈಲ್ವೆ ನಿಲ್ದಾಣದಲ್ಲಿ ಪೋಷಕರೊಂದಿಗೆ ಮಲಗಿದ್ದಾಗ ಕಾಣೆಯಾಗಿದ್ದ ಏಳು ತಿಂಗಳ ಮಗು ಬಿಜೆಪಿಯ ಕಾರ್ಪೊರೇಟರೊಬ್ಬರ ಮನೆಯಲ್ಲಿ ಪತ್ತೆಯಾಗಿದ್ದಾರೆ.
ಫಿರೋಝಾಬಾದ್ ಬಿಜೆಪಿ ಕಾರ್ಪೊರೇಟರ್ ವಿನಿತಾ ಅಗರ್ವಾಲ್ ಅವರ ಮನೆಯಲ್ಲಿ ಮಗು ಪತ್ತೆಯಾಗಿದ್ದು, ಮಕ್ಕಳ ಕಳ್ಳಸಾಗಣೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
ಬಿಜೆಪಿಯ ವಿನಿತಾ ಅಗರ್ವಾಲ್ ಮತ್ತು ಅವರ ಪತಿ ಮಕ್ಕಳ ಕಳ್ಳಸಾಗಣೆ ಗ್ಯಾಂಗ್ ಭಾಗವಾಗಿದ್ದ ಇಬ್ಬರು ವೈದ್ಯರಿಂದ 1.8 ಲಕ್ಷ ರೂ.ಗಳಿಗೆ ಈ ಮಗುವನ್ನು ಖರೀದಿಸಿದ್ದರು ಎಂದು ಆರೋಪಿಸಲಾಗಿದೆ. ಈ ದಂಪತಿಗೆ ಈಗಾಗಲೇ ಒಬ್ಬ ಮಗಳಿದ್ದಾಳೆ.
ಪ್ಲಾಟ್ ಫಾರ್ಮ್ ನಿಂದ ಮಗುವನ್ನು ಎತ್ತಿಕೊಂಡಾಗ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ವ್ಯಕ್ತಿ ಸೇರಿದಂತೆ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮಥುರಾದಲ್ಲಿ ರೈಲ್ವೆ ಪೊಲೀಸರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಮಗುವನ್ನು ತಾಯಿಗೆ ಹಸ್ತಾಂತರಿಸಿದರು.
ಹಣಕ್ಕಾಗಿ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್ ಈ ಮಗುವನ್ನು ಅಪಹರಿಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಹಮ್ಮದ್ ಮುಷ್ತಾಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.