Home ಟಾಪ್ ಸುದ್ದಿಗಳು ನೀರೆಂದು ಭಾವಿಸಿ ಡೀಸೆಲ್ ಕುಡಿದು ಮಗು ಮೃತ್ಯು

ನೀರೆಂದು ಭಾವಿಸಿ ಡೀಸೆಲ್ ಕುಡಿದು ಮಗು ಮೃತ್ಯು

ಒಡಿಶಾ: ನೀರೆಂದು ಭಾವಿಸಿ ಬಾಟಲಿಯಲ್ಲಿದ್ದ ಡೀಸೆಲ್ ಕುಡಿದ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.


ಆಟವಾಡುತ್ತಿದ್ದ ಮಗು ಅಪ್ಪನ ವಾಹನವನ್ನು ರಿಪೇರಿ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದು, ಬಾಯಾರಿಕೆ ಆಗಿದ್ದರಿಂದ ನೀರು ಎಂದುಕೊಂಡು ಡೀಸೆಲ್ ಅನ್ನು ಕುಡಿದಿದೆ. ಅದಾದ ಕೆಲವು ನಿಮಿಷಗಳ ನಂತರ ಆ ಮಗು ವಾಂತಿ ಮಾಡಲು ಪ್ರಾರಂಭಿಸಿದೆ.


ಇದರಿಂದ ಗಾಬರಿಯಾದ ಮಗುವಿನ ಪೋಷಕರು ತಕ್ಷಣ ಮಗುವನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

Join Whatsapp
Exit mobile version