ಭಾರತ- ಪಾಕ್ ಗಡಿಯಲ್ಲಿ ಹುಟ್ಟಿದ ಮಗುವಿಗೆ ‘ಬಾರ್ಡರ್’ ಎಂದು ನಾಮಕರಣ

Prasthutha|

ಚಂಡೀಗಡ: ಭಾರತ- ಪಾಕಿಸ್ತಾನದ ಗಡಿಯಲ್ಲಿ ಹುಟ್ಟಿದ ಮಗುವಿಗೆ ‘ಬಾರ್ಡರ್’ ಎಂದು ಪಾಕಿಸ್ತಾನದ ದಂಪತಿ ನಾಮಕರಣ ಮಾಡಿದ್ದಾರೆ.

- Advertisement -

ಈ ಪಾಕ್  ದಂಪತಿಗಳು ಕಳೆದ 71 ದಿನಗಳಿಂದ ಅಟ್ಟಾರಿ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಇವರ ಜೊತೆಗೆ ಇತರೆ 98 ಪಾಕಿಸ್ತಾನಿ ಪ್ರಜೆಗಳು ಕೂಡ ಇದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜನ್‌ ಪುರ ಜಿಲ್ಲೆಗೆ ಸೇರಿದ  ನಿಂಬು ಬಾಯಿ ಮತ್ತು ಬಲಮ್ ರಾಮ್ ಅವರ ಈ ಮಗು ಭಾರತ-ಪಾಕ್ ಗಡಿಯಲ್ಲಿ ಜನಿಸಿದ ಕಾರಣ “ಬಾರ್ಡರ್” ಎಂದು ಹೆಸರಿಡಲಾಗಿದೆ.

ತುಂಬು ಗರ್ಭಿಣಿಯಾಗಿದ್ದ ನಿಂಬು ಬಾಯಿಗೆ ಡಿಸೆಂಬರ್ 2 ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ವಿಚಾರ ತಿಳಿದ ನೆರೆಯ ಗ್ರಾಮದ ಮಹಿಳೆಯರು ನಿಂಬು ಬಾಯಿಯ ಸಹಾಯಕ್ಕೆ ಬಂದಿದ್ದಾರೆ. ಹೆರಿಗೆಗೆ  ಬೇಕಾದ ವೈದ್ಯಕೀಯ ಸೌಲಭ್ಯಗಳ ಜೊತೆಗೆ ಇತರ ಸಹಾಯವನ್ನೂ ಕೂಡ ಸ್ಥಳೀಯರು ಮಾಡಿದ್ದಾರೆ.

Join Whatsapp