Home ಟಾಪ್ ಸುದ್ದಿಗಳು “ಯಾತ್ರೆಯಲ್ಲಿ ಮಕ್ಕಳ ದುರುಪಯೋಗ”: ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ NCPCR ಆಗ್ರಹ

“ಯಾತ್ರೆಯಲ್ಲಿ ಮಕ್ಕಳ ದುರುಪಯೋಗ”: ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ NCPCR ಆಗ್ರಹ

ನವದೆಹಲಿ: ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಮಕ್ಕಳನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ತನಿಖೆಯನ್ನು ಮಾಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (NCPCR) ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ರಾಹುಲ್ ಗಾಂಧಿ ಮತ್ತು ಜವಾಹರ್ ಬಾಲ್ ಮಂಚ್, ರಾಜಕೀಯ ಉದ್ದೇಶದಿಂದ ಮಕ್ಕಳನ್ನು ಗುರಿಯಾಗಿಸಿಕೊಂಡು, ಅವರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ ಎಂಬ ದೂರು ನಮಗೆ ಬಂದಿರುವುದಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ತನ್ನ ದೂರಿನಲ್ಲಿ ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫೋಟೋ ಮತ್ತು ವೀಡಿಯೋಗಳನ್ನು ವೈರಲ್ ಮಾಡಲಾಗುತ್ತಿದೆ. ಇದರಲ್ಲಿ ಮಕ್ಕಳನ್ನು ಗುರಿಯಾಗಿಸಲಾಗುತ್ತಿದೆ ಮತ್ತು ಅವರನ್ನು ರಾಜಕೀಯ ಪ್ರಚಾರದಲ್ಲಿ ಭಾಗವಹಿಸುವಂತೆ ಮಾಡಲಾಗುತ್ತಿದೆ ಎಂಬ ದೂರು ನಮ್ಮ ಸಂಸ್ಥೆಗೆ ಬಂದಿದೆ ಎಂದು NCPCR ಹೇಳಿದೆ.

ವಯಸ್ಕರು ಮಾತ್ರ ರಾಜಕೀಯ ಪಕ್ಷದ ಭಾಗವಾಗಿರಬಹುದು ಎಂಬ ಚುನಾವಣಾ ಆಯೋಗದ ನಿಯಮಗಳು ರಾಹುಲ್ ಯಾತ್ರೆಯಲ್ಲಿ ಉಲ್ಲಂಘನೆಯಾಗಿದೆ ಎಂದು NCPCR ಆರೋಪಿಸಿದೆ.

Join Whatsapp
Exit mobile version