ಚಿಕ್ಕಮಗಳೂರು: ಚಲಿಸುವಾಗಲೇ ಕಳಚಿತು ಬಸ್ಸಿನ ಚಕ್ರ

Prasthutha|

ಚಿಕ್ಕಮಗಳೂರು: ಸಂಚರಿಸುತ್ತಿದ್ದಾಗಲೇ ಬಸ್ಸಿನ ಚಕ್ರ ಕಳಚಿ ಬಿದ್ದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರೋಟರಿ ಸರ್ಕಲ್‌ನಲ್ಲಿ ನಡೆದಿದೆ.

- Advertisement -

ಮಂಗಳವಾರ ರಾತ್ರಿ ಖಾಸಗಿ ಬಸ್ಸು ಬೆಂಗಳೂರಿನಿಂದ ಹೊರಟು ಶೃಂಗೇರಿಗೆ ಬರುತ್ತಿತ್ತು. ಬೆಳಗ್ಗೆ 5:18 ರ ವೇಳೆಗೆ ರೋಟರಿ ಸರ್ಕಲ್‌ನಲ್ಲಿ ಬಸ್ಸು ಸಂಚರಿಸುತ್ತಿದ್ದಾಗ ಹಿಂಬದಿಯ ಎರಡೂ ಚಕ್ರ ಕಳಚಿದೆ.

ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.



Join Whatsapp
Exit mobile version