ಚಿಕ್ಕಮಗಳೂರು: ಅತ್ಯಂತ ಸುಂದರ ಹಾವು ಪಶ್ಚಿಮ ಘಟ್ಟದಲ್ಲಿ ಪತ್ತೆ

Prasthutha|

ಚಿಕ್ಕಮಗಳೂರು: ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ಹಾವು ಸೆರೆ ಸಿಕ್ಕಿದೆ. ಕಾಫಿನಾಡಾದ ಕಳಸದಲ್ಲಿ ಈ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಹಾವು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ.

- Advertisement -

ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ, ಅಳಿವಿನಂಚಿನ ಉರಗ ಇದಾಗಿದೆ.
ಹೆಚ್ಚಾಗಿ ಬಿದಿರಿನ ಬೊಂಬುಗಳಲ್ಲಿ ವಾಸವಿರುವ ಕಾರಣ ಇದಕ್ಕೆ ಬ್ಯಾಂಬೋ ಪಿಟ್ ವೈಫರ್ ಎಂದು ಕರೆಯಲಾಗುತ್ತದೆ. ಉರಗ ತಜ್ಞ ರಿಜ್ವಾನ್ ವರು ಈ ಅಪರೂಪದ ಹಾವನ್ನ ಸೆರೆ ಹಿಡಿದು, ಅರಣ್ಯದೊಳಕ್ಕೆ ಬಿಟ್ಟುಬಂದಿದಾರೆ.