Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಮಳೆ ಅವಾಂತರ ; ಶೃಂಗೇರಿ- ಹೊರನಾಡು ಸಂಪರ್ಕದ ಕೊಗ್ರೆ ಸೇತುವೆ ಕುಸಿತ

ಚಿಕ್ಕಮಗಳೂರು: ಮಳೆ ಅವಾಂತರ ; ಶೃಂಗೇರಿ- ಹೊರನಾಡು ಸಂಪರ್ಕದ ಕೊಗ್ರೆ ಸೇತುವೆ ಕುಸಿತ

ಚಿಕ್ಕಮಗಳೂರು: ಈ ಬಾರಿ ಸುರಿದ ಮಹಾಮಳೆಯಿಂದಾಗಿ ಶೃಂಗೇರಿ ಹಾಗೂ ಹೊರನಾಡನ್ನು ಸಂಪರ್ಕಿಸುವ ಕೊಗ್ರೆ ಸೇತುವೆಯು ಸೇತುವೆ ಕುಸಿತಗೊಂಡಿದ್ದು ವಾಹನ ಸವಾರರು ಹಾಗೂ ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡನ್ನು ಸಂಪರ್ಕಿಸುವ  ಈ ಸೇತುವೆ ಬಿರುಕು ಬಿಟ್ಟು ಕುಸಿದಿರುವ ಪರಿಣಾಮ ಸ್ಥಳೀಯರಿಗೆ ಹಾಗೂ ಈ ಮಾರ್ಗದ ಮುಖಾಂತರ ಸಂಚರಿಸುವ ಪ್ರವಾಸಿಗರಿಗೆ ತೀವ್ರ ಅನಾನುಕೂಲ ಉಂಟಾಗಿದೆ. ಆದಷ್ಟು ಶೀಘ್ರವಾಗಿ ಸೇತುವೆಯನ್ನು ದುರಸ್ಥಿಗೊಳಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Join Whatsapp
Exit mobile version