ಕಡೂರು: ರಸ್ತೆ ನಿಯಮವನ್ನುಉಲ್ಲಂಘಿಸಿ ಹೆದ್ದಾರಿಯಲ್ಲಿ ವೀಲಿಂಗ್ ಮಾಡಿ ಪುಂಡಾಟಿಕೆ ತೋರಿದ ಯುವಕರಿಂದ ವಶಪಡಿಸಿಕೊಳ್ಳಲಾದ ಬೈಕ್ ಗಳ ಸೈಲೆನ್ಸರ್ ಗಳನ್ನು ಪೊಲೀಸರು ಪುಡಿಗಟ್ಟಿದ್ದಾರೆ.
ಮಾಡಿಫೈ ಮಾಡಲ್ಪಟ್ಟ ಸೈಲೆನ್ಸರ್ ಗಳನ್ನು ಕಳಚಿಸಿ ಸಾಲಾಗಿರಿಸಿದ ಪೊಲೀಸರು ಅವುಗಳ ಮೇಲೆ ರೋಡ್ ರೋಲರ್ ಹತ್ತಿಸಿ ಧ್ವಂಸಗೊಳಿಸಿದ್ದಾರೆ. ಹಾಲ್ಫ್ ಹೆಲ್ಮೆಟ್ ಧರಿಸಿ ಪ್ರಯಾಣಿಸುವ ಸವಾರರ ಹೆಲ್ಮೆಟ್ ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯುವಕರ ವೀಲಿಂಗ್ ಹುಚ್ಚಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಪಿ ಸೂಚನೆ ಮೇರೆಗೆ ಪೊಲೀಸರು ಬೈಕ್ ಗಳನ್ನು ಸೀಜ್ ಮಾಡಿದ್ದಾರೆ.