ಚಿಕ್ಕಮಗಳೂರು: ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ; ಕ್ಯಾಬ್ ಚಾಲಕನ ವಿರುದ್ಧ ಪೋಕ್ಸೋ ಕೇಸ್ ದಾಖಲು

Prasthutha|

ಕಡೂರು: ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಕ್ಯಾಬ್ ಚಾಲಕನನ್ನು ಗ್ರಾಮಸ್ಥರು ಥಳಿಸಿದ ಘಟನೆ ತಾಲೂಕಿನ ಸಕ್ಕರಾಯಪಟ್ಟಣದ ಸಿದ್ದರಹಳ್ಳಿಯಲ್ಲಿ ನಡೆದಿದೆ.

ಆರೋಪಿಯನ್ನು ರಾಜಪ್ಪ ಎಂದು ಗುರುತಿಸಲಾಗಿದೆ. ಕ್ಯಾಬ್ ನಲ್ಲಿ ಕಡೂರಿನಿಂದ ಸಿದ್ದರಹಳ್ಳಿಗೆ ಶಿಕ್ಷಕಿಯರನ್ನು ಕರೆತರುತ್ತಿದ್ದ ರಾಜಪ್ಪ  ಬೆಳಗ್ಗೆಯಿಂದ ಸಂಜೆವರೆಗೂ ಶಾಲೆ ಬಳಿಯೇ ಇರುತ್ತಿದ್ದ.

- Advertisement -

ಚಾಲಕ ರಾಜಪ್ಪನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು ನಂತರ ಪೊಲೀಸರಿಗೊಪ್ಪಿಸಿದ್ದಾರೆ. ರಾಜಪ್ಪನನ್ನು ವಶಕ್ಕೆ ಪಡೆದ ಸಖರಾಯಪಟ್ಣಣ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿದ್ದಾರೆ.

- Advertisement -