Home ಟಾಪ್ ಸುದ್ದಿಗಳು ಚಿಕ್ಕಮಗಳೂರು | ವಕೀಲನ ಮೇಲೆ ಹಲ್ಲೆ ಪ್ರಕರಣ: PSI ಸೇರಿ 6 ಸಿಬ್ಬಂದಿ ಅಮಾನತು

ಚಿಕ್ಕಮಗಳೂರು | ವಕೀಲನ ಮೇಲೆ ಹಲ್ಲೆ ಪ್ರಕರಣ: PSI ಸೇರಿ 6 ಸಿಬ್ಬಂದಿ ಅಮಾನತು

ಚಿಕ್ಕಮಗಳೂರು: ಹೆಲ್ಮೆಟ್ ವಿಚಾರವಾಗಿ ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪಿಎಸ್ ಐ ಮಹೇಶ್ ಪೂಜಾರಿ ಸೇರಿದಂತೆ ಆರು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್ ಪಿ ವಿಕ್ರಂ ಅಮ್ಟೆ ಆದೇಶಿಸಿದ್ದಾರೆ.


ಹೆಲ್ಮೆಟ್ ವಿಚಾರವಾಗಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಲಾಗಿತ್ತು. ಠಾಣೆಯಲ್ಲಿ ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಠಾಣೆ ಮುಂದೆ ಜಮಾಯಿಸಿದ್ದ ವಕೀಲರು ಆಕ್ರೋಶ ಹೊರಹಾಕಿದ್ದರು. ಸ್ಥಳಕ್ಕೆ ಆಗಮಿಸಿದ ಎಸ್ ಪಿ ವಿಕ್ರಂ, ವಿಚಾರಣೆ ನಡೆಸಿದ್ದರು.


ಪಿಎಸ್ಐ ಸೇರಿದಂತೆ ಆರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.

Join Whatsapp
Exit mobile version