Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಹಕ್ಕುಪತ್ರಕ್ಕಾಗಿ ಅನಿರ್ದಿಷ್ಟಾವಧಿ ಧರಣಿ; ವಸತಿ ರಹಿತರ ಪರವಾಗಿ ಪ್ರತಿಭಟನೆ

ಚಿಕ್ಕಮಗಳೂರು: ಹಕ್ಕುಪತ್ರಕ್ಕಾಗಿ ಅನಿರ್ದಿಷ್ಟಾವಧಿ ಧರಣಿ; ವಸತಿ ರಹಿತರ ಪರವಾಗಿ ಪ್ರತಿಭಟನೆ

ಕಳಸ: ‘ನಾವು ಯಾವ ಪಕ್ಷದ ಹಂಗಿನಲ್ಲಿಲ್ಲ.ಯಾರಿಂದಲೂ 5 ಪೈಸೆ ಪಡೆದಿಲ್ಲ. ನಮಗೆ ಹಕ್ಕುಪತ್ರ ಸಿಗುವವರೆಗೂ ಪ್ರತಿಭಟನೆ ಮಾಡುತ್ತೇವೆ’ ಎಂದು ಕುಂಬಳಡಿಕೆಯ ವಸತಿರಹಿತರ ಪರವಾಗಿ ಹೋರಾಟ ಮಾಡುತ್ತಿರುವ ಸಂಜೀವ ಅವರು ಹೇಳಿದ್ದಾರೆ.

ಕುಂಬಳಡಿಕೆಯ 49 ವಸತಿರಹಿತ ಕುಟುಂಬಗಳ ಪರವಾಗಿ ಸೋಮವಾರದಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ನಡೆಸಲು ಉದ್ದೇಶಿರುವ ಪ್ರತಿಭಟನೆ ಮತ್ತು ಅನಿರ್ದಿಷ್ಟಾವಧಿ ಧರಣಿಯನ್ನು ಕೈಬಿಡುವಂತೆ ತಹಶೀಲ್ದಾರ್ ಮತ್ತು ಕೆಲ ಮುಖಂಡರು ಸಂಧಾನ ನಡೆಸಲು ಯತ್ನಿಸಿದರೂ ವಿಚಲಿತರಾಗದ ಸಂಜೀವ ಅವರು ಮಾಧ್ಯಮದವರಿಗೆ ಈ ಪ್ರತಿಕ್ರಿಯೆ ನೀಡಿದರು.

‘ಮೂರು ವರ್ಷಗಳಿಂದ ಶಾಸಕರನ್ನು ಸಂಪೂರ್ಣವಾಗಿ ನಂಬಿದ್ದೆವು. ಬೆಂಗಳೂರಿಗೂ ಹೋಗಿ ಮುಖ್ಯಮಂತ್ರಿ ಮತ್ತು ವಸತಿ ಸಚಿವರನ್ನು ಭೇಟಿ ಮಾಡಿ ಬಂದೆವು. ಆದರೂ ನಮಗೆ ಹಕ್ಕು ಪತ್ರ ಕೊಡಲು ಆಗಿಲ್ಲ ಎಂದರೆ ಏನು ಹೇಳಬೇಕು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಕಳಸ ಗ್ರಾಮ ಪಂಚಾಯಿತಿಯಲ್ಲಿ ನೂರಾರು ವಸತಿರಹಿತರು 3 ದಶಕದಿಂದಲೂ ನಿವೇಶನಕ್ಕಾಗಿ ಕಾದಿದ್ದಾರೆ. ಹಿನಾರಿಯಲ್ಲಿ ಇನ್ನೂ 6 ಎಕರೆ ಭೂಮಿ ಮಂಜೂರು ಆಗಬಹುದು. ಕುಂಬಳಡಿಕೆಯ ಎಲ್ಲ ಕುಟುಂಬಗಳಿಗೆ ಒಮ್ಮೆಲೇ ನಿವೇಶನ ನೀಡಲು ತಾಂತ್ರಿಕ ಸಮಸ್ಯೆಯೂ ಇದೆ. ಕುಂಬಳಡಿಕೆಯ ವಸತಿರಹಿತರು ನಿವೇಶನಕ್ಕೆ ಅರ್ಹರೇ ಆದರೂ ಎಲ್ಲರ ಹೆಸರು ಕಳಸ ಪಂಚಾಯಿತಿಯ ನಿವೇಶನರಹಿತರ ಪಟ್ಟಿಯಲ್ಲಿ ಇಲ್ಲ’ ಎಂಬುದು ಅಧ್ಯಕ್ಷೆ ಸುಜಯಾ ಅವರ ಸ್ಪಷ್ಟೀಕರಣ ನೀಡಿದ್ದಾರೆ.

Join Whatsapp
Exit mobile version