ಮೂಡಿಗೆರೆ: ಕಾಫಿನಾಡು ಮಲೆನಾಡಿನ ಭಾಗದಲ್ಲಿ ಭಾರೀ ಪ್ರಮಾಣದ ಗಾಳಿ ಮಳೆಯಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬರಿಗೆ ಎಂಬಲ್ಲಿ ಎರಡನೇ ಮನೆ ಕುಸಿತವುಂಟಾಗಿದೆ.
ಎರಡು ದಿನ ಹಿಂದೆ ಅದೇ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ಕುಸಿತಗೊಂಡಿತ್ತು. ಇದೀಗ ಭೀಕರ ಗಾಳಿ ಮಳೆಗೆ ಲಲಿತ ಮಂಜುನಾಥ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದ್ದು ಗೋಡೆ ಕುಸಿತ ಗೊಂಡಿದೆ.