Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಕಾಡಾನೆ ದಾಳಿಯ ಆತಂಕ; ಪರಿಹಾರಕ್ಕೆ ಸಾರ್ವಜನಿಕರ ಒತ್ತಾಯ

ಚಿಕ್ಕಮಗಳೂರು: ಕಾಡಾನೆ ದಾಳಿಯ ಆತಂಕ; ಪರಿಹಾರಕ್ಕೆ ಸಾರ್ವಜನಿಕರ ಒತ್ತಾಯ

ಮೂಡಿಗೆರೆ: ತಾಲೂಕಿನಲ್ಲಿ ಕಾಡಾನೆ ದಾಳಿಯು ನಿರಂತರವಾಗಿದ್ದು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಮಳೆಗಾಲ ಪ್ರಾರಂಭವಾದ ಬಳಿಕ ಕಾಡಾನೆ ದಾಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳು ವುದೇ ರೈತರಿಗೆ  ಸವಾಲಾಗಿದೆ. ಕಾಡಾನೆ ದಾಳಿಗೆ ಭಯಪಟ್ಟು ಕಾರ್ಮಿಕರು ಕಾಫಿ ತೋಟಗಳಿಗೆ ಬರಲು ಹಿಂದೇಟು ಹಾಕುತ್ತಿರುವುದರಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹೊಸ್ಕೆರೆ, ಭೈರಾಪುರ, ಮೇಕನ ಗದ್ದೆ, ಕೋಗಿಲೆ, ಚೇಗು, ಕುಂದೂರು, ದರ್ಶನ, ತಳವಾರ, ಬೆಳಗೋಡು, ಬೆಟ್ಟಗೆರೆ, ಕೊಟ್ರಕೆರೆ, ಗುತ್ತಿ, ದೇವರ ಮನೆ ಸುತ್ತಮುತ್ತಲ ಗ್ರಾಮಗಳು ಸದಾ ಕಾಡಾನೆ ದಾಳಿಗೆ ಸಿಲುಕುವ ಪ್ರದೇಶಗಳಾಗಿವೆ.

ಅರಣ್ಯದಲ್ಲಿ ಮೇವಿನ ಕೊರತೆ ಆಗುತ್ತಿರುವುದರಿಂದ ಬಾಳೆ, ಅಡಿಕೆ, ತೆಂಗು, ಬೈನೆ ಮರಗಳನ್ನು ಹುಡುಕಿಕೊಂಡು ಕಾಡಾನೆಗಳು ಗ್ರಾಮಗಳತ್ತ ಬರುತ್ತಿರಬಹುದು. ಆದ್ದರಿಂದ ಸರ್ಕಾರ, ಸಂಘ–ಸಂಸ್ಥೆಗಳು ಒಗ್ಗೂಡಿ ವನ್ಯ ಪ್ರಾಣಿಗಳಿಗೆ ಅವಶ್ಯಕವಾದ ಹಣ್ಣು, ಹಂಪಲಿನ ಬೀಜಗಳನ್ನು ಅರಣ್ಯದಲ್ಲಿ ಬಿತ್ತುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು  ಒತ್ತಾಯಿಸುತ್ತಿದ್ದಾರೆ.

Join Whatsapp
Exit mobile version