Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ನಗರಸಭೆಯಿಂದ ಬುಲ್ಡೋಝರ್ ಕಾರ್ಯಾಚರಣೆ; ಅನಧಿಕೃತ ಮನೆಗಳು ನೆಲಸಮ

ಚಿಕ್ಕಮಗಳೂರು: ನಗರಸಭೆಯಿಂದ ಬುಲ್ಡೋಝರ್ ಕಾರ್ಯಾಚರಣೆ; ಅನಧಿಕೃತ ಮನೆಗಳು ನೆಲಸಮ

ಚಿಕ್ಕಮಗಳೂರು : ಕಾಫಿನಾಡಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜಸಿದ್ದು, ಅಕ್ರಮ ವಲಸಿಗರ ವಿರುದ್ಧ ನಗರಸಭೆ ಸಮರ ಸಾರಿದೆ. ಅನಧಿಕೃತ ಮನೆಗಳ ಪಟ್ಟಿ ತಯಾರಿಸಿದ ನಗರಸಭೆ ಅಧಿಕಾರಿಗಳು, ಅಕ್ರಮವಾಗಿ ನಿರ್ಮಿಸಿಕೊಂಡಿದ್ದ 5ಕ್ಕೂ ಹೆಚ್ಚು ಮನೆಗಳನ್ನು ಬುಲ್ಡೋಝರ್ ಸಹಾಯದಿಂದ ಧ್ವಂಸಗೈದಿದ್ದಾರೆ.

ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ವಲಸಿಗರು ನಿರ್ಮಿಸಿಕೊಂಡಿದ್ದ ಮನೆಗಳನ್ನು ನಗರಸಭಾ ಆಯುಕ್ತ ಬಸವರಾಜ್, ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನೇತೃತ್ವದಲ್ಲಿ  ಬುಲ್ಡೋಝರ್ ಕಾರ್ಯಾಚರಣೆ ನಡೆಸಿ ನೆಲಸಮ ಮಾಡಲಾಗಿದೆ.

20ಕ್ಕೂ ಹೆಚ್ಚು ಅನಧಿಕೃತ ಮನೆಗಳನ್ನು ನಿರ್ಮಿಸಿಕೊಂಡಿದ್ದ ಹೊರ ರಾಜ್ಯದ ಜನರು, ಮನೆ ತೆರೆವು ಕಾರ್ಯಾಚರಣೆಯನ್ನು ವಿರೋಧಿಸಿ, ಜೆಸಿಬಿಯನ್ನು ನಮ್ಮ ಮೇಲೆ ಹತ್ತಿಸಿ ಮನೆ ತೆರವುಗೊಳಿಸಬೇಡಿ ಎಂದು ನಗರಸಭೆ ವಿರುದ್ದ ಆಕ್ರೋಶಗೊಂಡರು.

Join Whatsapp
Exit mobile version