Home ಟಾಪ್ ಸುದ್ದಿಗಳು ಹಾಲಿಗೆ ರಾಸಾಯನಿಕ ಮಿಶ್ರಣ: ತಂದೆ ಮಗ ಸೇರಿ ನಾಲ್ವರ ಬಂಧನ

ಹಾಲಿಗೆ ರಾಸಾಯನಿಕ ಮಿಶ್ರಣ: ತಂದೆ ಮಗ ಸೇರಿ ನಾಲ್ವರ ಬಂಧನ

ಮಂಡ್ಯ: ಹಾಲಿಗೆ ರಾಸಾಯನಿಕ ಮಿಶ್ರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ-ಮಗ ಸೇರಿ ನಾಲ್ವರು ಆರೋಪಿಗಳನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ.

ಕೆ.ಹೊನ್ನಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಅಂಕರಾಜು, ಅವರ ಪುತ್ರ ರಂಜಿತ್, ಹಾಲು ಪರವೀಕ್ಷಕ ಕೆಂಪರಾಜು ಹಾಗೂ ಹಸುಗಳನ್ನು ಆರೈಕೆ ಮಾಡುತ್ತಿದ್ದ ಶಿವಣ್ಣ ಬಂಧಿತ ಆರೋಪಿಗಳಾಗಿದ್ದಾರೆ.

ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರದಲ್ಲಿ ಹಾಲಿಗೆ ರಾಸಾಯನಿಕ ಮಿಶ್ರಣ ಮಾಡಿರುವ ಕುರಿತಂತೆ ಮನ್ಮುಲ್ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp
Exit mobile version