ಬೆಂಗಳೂರು: ಬರೋಬ್ಬರಿ 3 ಲಕ್ಷದ 84 ಸಾವಿರದ 400 ಕೀಲೋ ಮೀಟರ್ ದೂರದಲ್ಲಿರುವ ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಅಧ್ಯಯನ ಚುರುಕುಗೊಂಡಿದೆ. ಚಂದ್ರನ ಮೇಲೆ ಅಧ್ಯಯನ ಪ್ರಾರಂಭಿಸಿರುವ ಪ್ರಗ್ಯಾನ್ ರೋವರ್ ಬಗ್ಗೆ ಕ್ಷಣಕ್ಷಣದ ಮಾಹಿತಿ ನೀಡುತ್ತಿರುವ ಇಸ್ರೋ, ಇದೀಗ ಮತ್ತೊಂದು ದೊಡ್ಡ ಅಪ್ಡೇಟ್ ನೀಡಿದೆ.
ಈ ಬಾರಿ ಪ್ರಗ್ಯಾನ್ ರೋವರ್, ಚಂದ್ರನ ತಾಪಮಾನದ ವರದಿ ಕಳುಹಿಸಿದೆ. 50 ಸೆಲ್ಸಿಯಸ್ನಿಂದ 10 ಸೆಲ್ಸಿಯಸ್ವರೆಗೆ ಹಗಲಿನ ತಾಪಮಾನ ಇದೆ ಎಂದು ಪ್ರಗ್ಯಾನ್ ರೋವರ್ ವರದಿ ಕಳುಹಿಸಿಕೊಟ್ಟಿದ್ದು, ಇದನ್ನು ಇಸ್ರೋ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಚಂದ್ರನ ಮೇಲಿರುವ ತಾಪಮಾನದ ಮಾಹಿತಿ ಬಹಿರಂಗಗೊಂಡಿದೆ.
ಒಟ್ಟಿನಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ನಾಲ್ಕೇ ದಿನಕ್ಕೆ ಇದೀಗ ಹಲವು ಮಾಹಿತಿಗಳು ಬರುತ್ತಿದ್ದು, ಇದೀಗ ಇಸ್ರೋ ವಿಜ್ಞಾನಿಗಳು ಅವುಗಳ ಅಧ್ಯಯನ ಆರಂಭಿಸಿದ್ದಾರೆ.