Home ಟಾಪ್ ಸುದ್ದಿಗಳು ಚಂದ್ರಯಾನ-3 | ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸು ಪಡೆಯಲು ಪ್ರಧಾನಿ ಮೋದಿ ಯತ್ನ: ಕೆ.ಸಿ. ವೇಣುಗೋಪಾಲ್

ಚಂದ್ರಯಾನ-3 | ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸು ಪಡೆಯಲು ಪ್ರಧಾನಿ ಮೋದಿ ಯತ್ನ: ಕೆ.ಸಿ. ವೇಣುಗೋಪಾಲ್

ನವದೆಹಲಿ: ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.


ಚಂದ್ರಯಾನ-3 ಯಶಸ್ಸಿನ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿಯುವ ಸಂಭ್ರಮ ಮತ್ತು ಹೆಮ್ಮೆ ನಮ್ಮೊಂದಿಗೆ ದೀರ್ಘಕಾಲ ಉಳಿಯಲಿದೆ ಎಂದು ಹೇಳಿದರು.


ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಮುಂದಾಳತ್ವದಲ್ಲಿ ನಿಜಕ್ಕೂ ಇತಿಹಾಸವನ್ನು ಸೃಷ್ಟಿಸಿದ್ದೇವೆ. ಸೋಮನಾಥ್ ಮತ್ತು ಅವರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆದರೆ ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡ್ ಆದ ತಕ್ಷಣ ಪರದೆಯಲ್ಲಿ ಕಾಣಿಸಿಕೊಂಡ ಪ್ರಧಾನಿ ಮೋದಿ, ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸು ಪಡೆಯಲು ಯತ್ನಿಸಿದ್ದಾರೆ. ಆದರೆ ಇಸ್ರೊ ಮತ್ತು ವಿಜ್ಞಾನಿಗಳಿಗೆ ನೆರವು ನೀಡುವಲ್ಲಿ ಸರ್ಕಾರವು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

Join Whatsapp
Exit mobile version