ಟೋಕಿಯೋ: ಮೀರಾಬಾಯಿ ಚಾನು ಒಲಿಂಪಿಕ್ಸ್ ವೇಟ್‌ಲಿಫ್ಟಿಂಗ್‌ನಲ್ಲಿ ಗೆದ್ದ ಬೆಳ್ಳಿಯು ಚಿನ್ನವಾಗಿ ಬದಲಾಗುವ ಸಾಧ್ಯತೆ ಇದೆ. ವಿಶ್ವದ ನಂಬರ್ ಒನ್ ವೇಟ್ ಲಿಫ್ಟರ್ ಚೀನಾದ ಶಿಹುಯಿ ಹೌ ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾದರೆ ಚಾನುವಿಗೆ ಚಿನ್ನ ಲಭಿಸಲಿದೆ.
ಚಿನ್ನ ಗೆದ್ದಿದ್ದ ಶಿಹುಯಿ ಹೌ ಅವರಿಗೆ ಒಲಿಂಪಿಕ್ಸ್ ಸಮಿತಿಯು ಉದ್ದೀಪನಾ ಪರೀಕ್ಷೆಯ ನಂತರ ಮನೆಗೆ ಮರಳುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಚೀನಾದ ಅಥ್ಲೀಟ್ ಶಿಹುಯಿ ಹೌ 49 ಕೆಜಿ ವಿಭಾಗದಲ್ಲಿ 210 ಕೆಜಿ ಭಾರ ಎತ್ತುವ ಮೂಲಕ ಒಲಿಂಪಿಕ್ಸ್ ದಾಖಲೆ ನಿರ್ಮಿಸಿ ಚಿನ್ನ ಗೆದ್ದಿದ್ದರು. ಮೀರಾಬಾಯಿ ಚಾನು ಸ್ನ್ಯಾಚ್ ನಲ್ಲಿ 87 ಕೆಜಿ ಮತ್ತು ಕ್ಲೀನ್ ಆಂಡ್ ಜರ್ಕ್ ನಲ್ಲಿ 115 ಕೆಜಿ ಎತ್ತುವ ಮೂಲಕ ಒಟ್ಟು 202 ಕೆಜಿ ಎತ್ತಿ ಬೆಳ್ಳಿ ಗೆದ್ದಿದ್ದರು. ಇಂಡೋನೇಷ್ಯಾದ ಐಸಾ ವಿಂಡಿ 194 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದರು.
ಪಿ.ವಿ ಸಿಂಧು ನಂತರ ಚಾನು ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.