Home ಟಾಪ್ ಸುದ್ದಿಗಳು ಚಾಮರಾಜಪೇಟೆ: ವಕ್ಫ್ ಬೋರ್ಡ್ ಗೆ ಸೇರಿದ ಈದ್ಗಾ ಮೈದಾನ ವನ್ನು ಕಂದಾಯ ಇಲಾಖೆ ಆಸ್ತಿ ಎಂದು...

ಚಾಮರಾಜಪೇಟೆ: ವಕ್ಫ್ ಬೋರ್ಡ್ ಗೆ ಸೇರಿದ ಈದ್ಗಾ ಮೈದಾನ ವನ್ನು ಕಂದಾಯ ಇಲಾಖೆ ಆಸ್ತಿ ಎಂದು ಆದೇಶ ಹೊರಡಿಸಿದ BBMP

ಬೆಂಗಳೂರು: ಚಾಮರಾಜಪೇಟೆಯ ವಕ್ಫ್ ಬೋರ್ಡ್ ಗೆ ಸೇರಿದ್ದ ಈದ್ಗಾ ಮೈದಾನವನ್ನು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಆಸ್ತಿ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ BBMP) ಆದೇಶ ಹೊರಡಿಸಿದೆ.

ಈದ್ಗಾ ಮೈದಾನದ ಬಗ್ಗೆ ಇತ್ತೀಚೆಗೆ ಕೆಲವು ಸಂಘ ಪರಿವಾರದ ಗೂಂಡಾಗಳು ಅಲ್ಲಿ ಹಿಂದೂಗಳ ಪೂಜೆ , ಆಚರಣೆಗಳಿಗೆ ಅವಕಾಶ ನೀಡಬೇಕು ಎಂದು ಗಲಾಟೆ ಎಬ್ಬಿಸಿ ವಿವಾದವಾಗಿತ್ತು. ಮೈದಾನವನ್ನು ತಮ್ಮ ಹೆಸರಿಗೆ ಖಾತಾ ಇಂಡೀಕರಣಕ್ಕೆ ವಕ್ಫ್ ಬೋರ್ಡ್ ಬಿಬಿಎಂಪಿಗೆ ಅರ್ಜಿ ಕೂಡಾ ಸಲ್ಲಿಸಿತ್ತು. ವಕ್ಫ್ ಬೋರ್ಡ್ ಅರ್ಜಿ ವಜಾಗೊಳಿಸಿದ ಬಿಬಿಎಂಪಿ, ಚಾಮರಾಜಪೇಟೆ ಮೈದಾನ ರಾಜ್ಯ ಸರ್ಕಾರದ್ದು ಎಂದು ಆದೇಶ ಹೊರಡಿಸಿದೆ. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ಈ ಆದೇಶ ಪ್ರಕಟಿಸಿದ್ದಾರೆ.

ವಕ್ಫ್ ಬೋರ್ಡ್ ಎನ್ನುವುದಕ್ಕೆ ದಾಖಲೆ ಕೇಳಿ ವಕ್ಪ್ ಬೋರ್ಡ್ ಗೆ ಜಂಟಿ ಆಯುಕ್ತ ಶ್ರೀನಿವಾಸ್ ನೋಟಿಸ್ ನೀಡಿದ್ದರು. ಆದರೆ ಎರಡು ತಿಂಗಳ ಕಾಲಾವಕಾಶ ನೀಡಿದರೂ ಸಹ ವಕ್ಪ್ ಬೋರ್ಡ್ ದಾಖಲೆಗಳನ್ನ ಬಿಬಿಎಂಪಿಗೆ ಸಲ್ಲಿಕೆ ಮಾಡಿಲ್ಲ ಎನ್ನಲಾಗಿದೆ.

ಇದೀಗ ಮೈದಾನದ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡದ ಕಾರಣ ಬಿಬಿಎಂಪಿ ಜಂಟಿ ಆಯುಕ್ತರು ಈದ್ಗಾ ಮೈದಾನ ವನ್ನು ಕಂದಾಯ ಇಲಾಖೆ ಆಸ್ತಿ ಎಂದು ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

Join Whatsapp
Exit mobile version