ಚಾಮರಾಜನಗರ ನಗರಸಭೆ ಉಪ ಚುನಾವಣೆ: ಎಸ್ ಡಿಪಿಐಗೆ ಭರ್ಜರಿ ಗೆಲುವು

Prasthutha|

ಚಾಮರಾಜನಗರ: ಚಾಮರಾಜನಗರ ನಗರಸಭೆಯ 6ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಎಸ್‌ಡಿಪಿಐ ಗೆಲುವು ಸಾಧಿಸಿದೆ. ಈ ಹಿಂದೆಯೂ ಈ ವಾರ್ಡ್ ನಲ್ಲಿ ಎಸ್ ಡಿಪಿಐ ಗೆಲುವು ಸಾಧಿಸಿತ್ತು. ಸದಸ್ಯರಾಗಿದ್ದ ಸಮೀವುಲ್ಲಾ ಅವರ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು.

- Advertisement -

ಎಸ್ ಡಿಪಿಐ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಎಸ್ ಡಿಪಿಐ ನಿಂದ ಅಪ್ಸರ್ ಪಾಷ, ಕಾಂಗ್ರೆಸ್ ನಿಂದ ಸೈಯದ್ ಅತೀಕ್ ಅಹಮದ್, ಜೆಡಿಎಸ್ ನಿಂದ ಮುಹಮ್ಮದ್ ಜಾವೀದ್ ಹಾಗೂ ಬಿಜೆಪಿಯಿಂದ ಪಿ.ಮಹೇಶ್ ಸ್ಪರ್ಧಿಸಿದ್ದರು.

ಎಸ್ ಡಿಪಿಐ ಅಭ್ಯರ್ಥಿ ಅಪ್ಸರ್ ಪಾಷಾ ಅವರು 651 ಮತಗಳನ್ನು ಪಡೆದು ಜಯಭೇರಿ ಭಾರಿಸಿದ್ದಾರೆ. ಕಾಂಗ್ರೆಸ್ ನ ಸೈಯದ್ ಅತೀಕ್ ಅಹ್ಮದ್ ಅವರು 399, ಜೆಡಿಎಸ್ ನ ಮುಹಮ್ಮದ್ ಜಾವೀದ್ ಅವರು 82 ಹಾಗೂ ಬಿಜೆಪಿಯ ಮಹೇಶ್ ಅವರು 73 ಮತಗಳನ್ನು ಗಳಿಸಿದ್ದಾರೆ. ನೋಟಾಗೆ ನಾಲ್ಕು ಮತಗಳು ಬಿದ್ದಿವೆ. ಒಟ್ಟು 1,801 ಮತದಾರರ ಪೈಕಿ, 1,209 ಮಂದಿ ಮತದಾನ ಮಾಡಿದ್ದರು.

Join Whatsapp