Home ಟಾಪ್ ಸುದ್ದಿಗಳು ಚಾಮರಾಜನಗರ ದುರಂತ ಸರಕಾರಿ ಪ್ರಾಯೋಜಿತ ಕೊಲೆ : ರಿಝ್ವಾನ್ ಅರ್ಷದ್

ಚಾಮರಾಜನಗರ ದುರಂತ ಸರಕಾರಿ ಪ್ರಾಯೋಜಿತ ಕೊಲೆ : ರಿಝ್ವಾನ್ ಅರ್ಷದ್

ಚಾಮರಾಜನಗರ: ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ಕೊರತೆಯಿಂದಾಗಿ ನಡೆದ ಮಹಾದುರಂತವು ಸರಕಾರ ನಡೆಸಿರುವ ಸಾಮೂಹಿಕ ಕೊಲೆಯೆಂದು ಸಂಸದ ರಿಝ್ವಾನ್ ಅರ್ಷದ್ ಹೇಳಿದ್ದಾರೆ.

ಚಾಮರಾಜನಗರ ಘಟನೆಗೆ ಸಂಬಂಧಿಸಿ ‘ಪ್ರಸ್ತುತ ನ್ಯೂಸ್’ ಜೊತೆ ಮಾತನಾಡಿರುವ ರಿಝ್ವಾನ್ ಅರ್ಷದ್, ಕೋವಿಡ್ ಬಾಧಿತರಾಗಿ ಸಾಯುವುದು ಮತ್ತು ಆಕ್ಸಿಜನ್ ಇಲ್ಲದೆ ಸಾಯುವುದಕ್ಕೆ ಬಹಳಷ್ಟು ವ್ಯತ್ಯಾಸವಿದೆ. ಹಾಗಾಗಿ ಇದನ್ನು ಕೊಲೆ ಎಂದೇ ವ್ಯಾಖ್ಯಾನಿಸಬಹುದು. ಈ ಘಟನೆಗೆ ಸರಕಾರವೇ ನೇರ ಹೊಣೆ. ಸರಕಾರವೇ ಜನರನ್ನು ಸಾಯಿಸಿದೆ ಎಂದು ಹೇಳಿದ್ದಾರೆ.

ಈ ಘಟನೆಗೆ ಸರಕಾರದ ವೈಫಲ್ಯವೇ ಕಾರಣ. ಹಾಗಾಗಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಆರೋಗ್ಯ ಸಚಿವ ಡಾ.ಸುಧಾಕರ್ ಅವರ ‘ಇದು ಆಕ್ಸಿಜನ್ ಕೊರೆತೆಯಿಂದಾಗಿ ನಡೆದ ಘಟನೆಯಲ್ಲ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ದೇವರು ಪ್ರತಿಯೊಂದನ್ನು ನೋಡುತ್ತಿದ್ದಾರೆ ಎಂಬುವುದನ್ನು ನಾನು ಜ್ಞಾಪಿಸುತ್ತೇನೆ. ಸುಳ್ಳು ಹೇಳುವುದಕ್ಕೂ ಒಂದು ಇತಿ ಮಿತಿ ಇರುತ್ತೆ ಈ ರೀತಿ ಸುಳ್ಳು ಹೇಳಬಾರದು. ಬಿಜೆಪಿ ಸರಕಾರ ದುಡ್ಡು ಹೊಡೆಯುವುದರಲ್ಲಿ ಕಾಲ ಕಳೆಯುತ್ತಿದೆ. ಜನರ ಪ್ರಾಣ ಉಳಿಸಲು ನಿಮ್ಮ ಕೈಯ್ಯಲ್ಲಿ ಶಕ್ತಿಯಿಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಹೇಳಿದ್ದಾರೆ.

Join Whatsapp
Exit mobile version