ಚಕ್ರತೀರ್ಥ ಸಮಿತಿಯಿಂದ ತಪ್ಪಾಗಿದೆ, ಒಪ್ಪಿಕೊಳ್ಳುತ್ತೇವೆ: ಸಚಿವ ಬಿ.ಸಿ.ನಾಗೇಶ್

Prasthutha|

►►ಬಸವಣ್ಣನವರ ಬಗ್ಗೆ ಬರಗೂರು ಸಮಿತಿಯ ಪಠ್ಯ ಪುಸ್ತಕ ಬಳಕೆ

- Advertisement -

ಧಾರವಾಡ: ಪಠ್ಯಪುಸ್ತಕ ಕುರಿತಂತೆ ಮುಖ್ಯಮಂತ್ರಿ ಲಿಖಿತ ಹೇಳಿಕೆ ಕೊಟ್ಟಿದ್ದಾರೆ. ಲೋಪ ದೋಷ ಸರಿ ಮಾಡುತ್ತೇವೆ. ಇದರಲ್ಲಿ ರಾಜಕೀಯ ಲಾಭ ಎನ್ನುವುದಾಗಲಿ ಇಲ್ಲವೇ ಸಮಾಜ ಒಡೆಯುವ ಕೆಲಸ ಮಾಡಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಬಗ್ಗೆ ಹಿಂದಿನ ಸಮಿತಿಯ ಪರಿಷ್ಕರಣೆ ತೆಗೆದುಕೊಳ್ಳಲು ನಿರ್ಧಾರ ಮಾಡಲಾಗಿದೆ. ಸಾಧು, ಸಂತರ ಜೀವನದ ಕುರಿತು ಆದ ತಪ್ಪುಗಳನ್ನು ಒಪ್ಪಿಕೊಂಡಿದ್ದೇವೆ ಎಂದರು.


ಪಠ್ಯಪುಸ್ತಕಗಳನ್ನು ಒಂದು ತಿಂಗಳಲ್ಲಿ ಮರು ಮುದ್ರಣ ಮಾಡುತ್ತವೆ. ಸಾರ್ವಜನಿಕ ಅವಗಣನೆಗೆ, ಸಲಹೆ ಪಡೆದು ಸಿದ್ಧಪಡಿಸುತ್ತೇವೆ ಎಂದ ಅವರು, ಕಲಿತಾ ಚೇತರಿಕೆ ಕಾರ್ಯಕ್ರಮಕ್ಕೆ ಒಳ್ಳೆಯ ಸ್ಪಂದನೆ ದೊರೆತಿದೆ ಎಂದರು. ಪಠ್ಯಪುಸ್ತಕದ ಮುದ್ರಣಕ್ಕೆ ಕಾಗದ ಕೊರತೆಯಿಂದ ಕಂಡುಬಂದಿತ್ತು. ಈಗ ಎಲ್ಲ ಸರಿದೂಗಿಸಿದ್ದೇವೆ. ಈ ಸಲ ಶಿಕ್ಷಣ ಗುಣಮಟ್ಟಕ್ಕೆ ಪೂರ್ಣ ಆದ್ಯತೆ ನೀಡುತ್ತವೆ ಎಂದರು
ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಂಡಿದ್ದೆವೆ. 7 ಸಾವಿರ ಕೊಠಡಿ ನಿರ್ಮಾಣ ಮಾಡಲು ಆದೇಶಿಸಿದ್ದೇವೆ. ಶಾಲೆ ಆರಂಭದಿಂದಲೇ 27 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡುತ್ತಿದ್ದೇವೆ. ಸೈಕಲ್ ವಿತರಣೆ ಕೈ ಬಿಟ್ಟಿಲ್ಲ. ಮೊದಲ ಆದ್ಯತೆ ಶಿಕ್ಷಣ ಗುಣಮಟ್ಟದ್ದಾಗಿದೆ ಎಂದರು.

- Advertisement -


ಪರಿಷ್ಕರಣಾ ಸಮಿತಿ ಈಗ ಮಾಡಿದ್ದು ಅಲ್ಲ. ಕಳೆದ ಒಂದು ವರ್ಷಗಳಿಂದ ಕೆಲಸ ಆರಂಭಗೊಂಡಿದೆ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಅನೇಕ ತಪ್ಪುಗಳು ಆಗಿವೆ. ಇದನ್ನು ರಾಜಕೀಯವಾಗಿ ವಿಚಾರ ಮಾಡಬಾರದು. ನಾವು ಪಠ್ಯಪುಸ್ತಕದ ತಪ್ಪಿಗೆ ಸಮರ್ಥನೆ ಮಾಡಲ್ಲ. ತಪ್ಪು ಒಪ್ಪಿಕೊಳ್ಳುತ್ತೇವೆ. ಲೋಪದೋಷ ಸರಿ ಮಾಡುತ್ತೇವೆ ಎಂದರು.


ಚಡ್ಡಿ ಸಂಘರ್ಷ ಕುರಿತು ಮಾತನಾಡಿದ ಸಚಿವರು, ಚಡ್ಡಿ ಹೋಗಿ ಪ್ಯಾಂಟ್ ಬಂದಿರುವುದು ಗೊತ್ತಿಲ್ಲ ಸಿದ್ದರಾಮಯ್ಯ ಅವರಿಗೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಗೆ ಯಾವ ವಿಷಯ ಇಲ್ಲದೇ ಇದ್ದಾಗ ಇಂತಹ ಆರ್ ಎಸ್ ಎಸ್. ಹಿಂದುತ್ವದ ವಿರೋಧಿ ಅಲೆ ಕುರಿತು ಮಾತನಾಡಿ ತನ್ನ ಮತ ಬ್ಯಾಂಕ್ ಭದ್ರ ಮಾಡುವ ಕೆಲಸಮಾಡುತ್ತದೆ ಎಂದ ಅವರು, ಸಂಘ ಯಾವ ಸೂಚನೆಯನ್ನು ನಮಗೆ ನೀಡಿಲ್ಲ ಎಂದರು.
ಈ ಶೈಕ್ಷಣಿಕ ವರ್ಷದಲ್ಲಿ ಗ್ರಾ‌ಪಂ ಒಂದಕ್ಕೆ ಮಾದರಿ ಶಾಲೆ ಆರಂಭಿಸಲು ಸೂಚನೆ ನೀಡಿದ್ದೇವೆ. ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ಬಸವರಾಜ ಹೊರಟ್ಟಿ ಈ ಬಾರಿಯೂ ದಾಖಲೆಯ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಪರವೇ ಒಲವು ಇದೆ ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಮೃತ ದೇಸಾಯಿ, ಮೇಯರ್ ಈರೇಶ ಅಂಚಟಗೇರಿ, ಮಾಜಿ ಶಾಸಕಿ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ ಇದ್ದರು.



Join Whatsapp